ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: 'ದೀನ್ ದಯಾಳ್ ಉಪಾಧ್ಯಾಯ ಪಂಚಾಯತ್ ಸಶಕ್ತೀಕರಣ ಪ್ರಶಸ್ತಿ - 2022' ಕ್ಕೆ ದ.ಕ.ಜಿಪಂ ಆಯ್ಕೆ

ಮಂಗಳೂರು: ಭಾರತ ಸರಕಾರದಿಂದ ಕೊಡ ಮಾಡುವ ಪ್ರತಿಷ್ಠಿತ 'ದೀನ್ ದಯಾಳ್ ಉಪಾಧ್ಯಾಯ ಪಂಚಾಯತ್ ಸಶಕ್ತೀಕರಣ ಪ್ರಶಸ್ತಿ -2022' ಗೆ ರಾಜ್ಯದಿಂದ ದ.ಕ.ಜಿಲ್ಲಾ ಪಂಚಾಯತ್ ಆಯ್ಕೆಯಾಗಿದೆ.

ಭಾರತ ಸರ್ಕಾರವು ನೀಡುವ ಪಂಚಾಯತ್ ಪುರಸ್ಕಾರ ಸಾಮಾನ್ಯ ವಿಭಾಗದಡಿ ನೀಡುವ ಈ ಪ್ರಶಸ್ತಿಗೆ ದ.ಕ. ಜಿಲ್ಲಾ ಪಂಚಾಯತ್ ಆಯ್ಕೆಯಾಗಿದೆ. ದೇಶದಲ್ಲಿ ಎ.24 ಅನ್ನು ರಾಷ್ಟ್ರೀಯ ಪಂಚಾಯತ್ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ. ಈ ಸಂದರ್ಭ ಇಡೀ ರಾಷ್ಟ್ರಾದ್ಯಂತ ಪ್ರತೀ ರಾಜ್ಯದಿಂದ ಒಂದು ಜಿಲ್ಲಾ ಪಂಚಾಯತ್ ಅನ್ನು 'ದೀನ್ ದಯಾಳ್ ಉಪಾಧ್ಯಾಯ ಪಂಚಾಯತ್ ಸಶಕ್ತೀಕರಣ ಪ್ರಶಸ್ತಿ'ಗೆ ಆಯ್ಕೆ ಮಾಡಲಾಗುತ್ತದೆ. ಈ ಬಾರಿ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಕರ್ನಾಟಕ ರಾಜ್ಯದಲ್ಲಿ ದ.ಕ.ಜಿಪಂ ತನ್ನದಾಗಿಸಿಕೊಂಡಿದೆ.

ದ.ಕ.ಜಿಪಂ ಜಿಲ್ಲಾ ಪಂಚಾಯತ್ ವ್ಯಾಪ್ತಿ ಸಾಮಾನ್ಯ ವಿಭಾಗದಲ್ಲಿ ನಿಗದಿಪಡಿಸಿರುವ ಎಲ್ಲಾ ಅಂಶಗಳಲ್ಲಿ ಉತ್ತಮ ಸಾಧನೆ ಮಾಡಿರುವುದನ್ನು ಪರಿಗಣಿಸಿ ಹಾಗೂ 2021-22 ರ ಎಲ್ಲಾ ಕಾರ್ಯಕ್ಷಮತೆಯನ್ನು ಪರಿಗಣಿ, ಪ್ರಗತಿಯನ್ನು ಆಧರಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

Edited By : Nirmala Aralikatti
Kshetra Samachara

Kshetra Samachara

17/04/2022 10:59 pm

Cinque Terre

9.75 K

Cinque Terre

0

ಸಂಬಂಧಿತ ಸುದ್ದಿ