ಕುಂದಾಪುರ: ಕುಂದಾಪುರ ಪುರಸಭೆ ವ್ಯಾಪ್ತಿಗೆ ಸೇರಿದ ಮದ್ದುಗುಡ್ಡೆ ಎಂಬಲ್ಲಿ ಪ್ರಕಾಶ್ ಮಿಲ್ ಹತ್ತಿರದ ಚರಂಡಿಯಲ್ಲಿ ಕೊಳಚೆ ನೀರು ತುಂಬಿ ದುರ್ವಾಸನೆ ಬೀರುತ್ತಿದೆ. ಇದು ಸಾರ್ವಜನಿಕರಲ್ಲಿ ಆಕ್ರೋಶ ಮೂಡಿಸಿದೆ.
ಆ ಭಾಗದಲ್ಲಿ ವಾಸಿಸುವ ಜನರು ಹಾಗೂ ಅಕ್ಕಪಕ್ಕ ಓಡಾಡುವ ಜನರು ಮೂಗು ಮುಚ್ಚಿ ಓಡಾಡುವ ಸಂದರ್ಭ ಬಂದೊದಗಿದೆ. ಈ ಭಾಗದಲ್ಲಿ ಮಕ್ಕಳಿದ್ದು ಸಾಂಕ್ರಾಮಿಕ ರೋಗಕ್ಕೆ ತುತ್ತಾಗುವ ಭೀತಿ ಉಂಟಾಗಿದೆ. ಹೀಗಾಗಿ ಪೋಷಕರು ಆತಂಕಗೊಂಡಿದ್ದಾರೆ. ತಕ್ಷಣ ಸಂಬಂಧಪಟ್ಟ ಇಲಾಖೆಯವರು ಇತ್ತ ಕಡೆ ಗಮನ ಹರಿಸಬೇಕೆಂದು ಮದ್ದುಗುಡ್ಡೆ ಪರಿಸರದ ಜನರು ಆಗ್ರಹಿಸಿದ್ದಾರೆ.
Kshetra Samachara
29/03/2022 06:56 pm