ಬಜಪೆ : ಮೂಡಬಿದಿರೆ-ಮಂಗಳೂರು ರಾಜ್ಯ ಹೆದ್ದಾರಿ 169 ರ ಕೈಕಂಬ ಸಮೀಪ ಬಸ್ ನಿಲ್ದಾಣವೊಂದರ ಮೇಲ್ಛಾವಣೆಯು ಕುಸಿದು ಬೀಳುವ ಹಂತದಲ್ಲಿದ್ದು,ಪ್ರಯಾಣಿಕರು ನಿಲ್ದಾಣವನ್ನು ಆಶ್ರಯಿಸಲು ದುಸ್ಥರವಾಗಿದೆ.
ಅತೀ ಹಳೆಯದಾದ ಬಸ್ ನಿಲ್ದಾಣ ಇದಾಗಿದ್ದು,ಕಳೆದ ಹಲವು ವರ್ಷಗಳಿಂದ ಇದು ನಿರ್ವಹಣೆ ಕಂಡಿಲ್ಲ. ನಿಲ್ದಾಣದ ಸುತ್ತ ಪೊದೆಗಳು ಬೆಳೆದು ನಿಂತಿದೆ. ಬಸ್ ನಿಲ್ದಾಣದ ಎದುರು ಭಾಗದಲ್ಲಿಯೇ ಶಾಲೆ ಕೂಡ ಇದೆ.ಕುಸಿದು ಬೀಳುವ ಹಂತದಲ್ಲಿರುವ ಕಾರಣ ಬಸ್ಸು ನಿಲ್ದಾಣವನ್ನು ಶಾಲಾ ಮಕ್ಕಳು ಸೇರಿದಂತೆ ಯಾರೂ ಆಶ್ರಯಿಸುವಂತಿಲ್ಲ.ಇಲ್ಲಿ ಪ್ರಯಾಣೆಕರಿಗಾಗಿ ತಂಗುದಾಣವೇ ಇಲ್ಲದೆ ರಸ್ತೆಯ ಅಂಚಿನಲ್ಲಿಯೇ ಬಸ್ಸಿಗಾಗಿ ಕಾಯುವಂತಹ ಪರಿಸ್ಥಿತಿ ಎದುರಾಗಿದೆ.
ಕುಸಿದು ಬೀಳುವ ಹಂತದಲ್ಲಿರುವ ಬಸ್ ನಿಲ್ದಾಣದ ದುರಸ್ತಿ ಕಾರ್ಯವನ್ನ ಸಂಬಂಧಪಟ್ಟವರು ಮಾಡಬೇಕಿದೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
Kshetra Samachara
09/03/2022 01:12 pm