ಸುರತ್ಕಲ್: ಅನಧಿಕೃತ ಎನ್ ಐಟಿಕೆ ಟೋಲ್ ಗೇಟ್ ವಿರುದ್ಧ ಸಮಾಜ ಸೇವಕ ಆಸೀಫ್ ಆಪತ್ಬಾಂಧವ ಅವರು ಟೋಲ್ ಸಮೀಪ ಅಹೋರಾತ್ರಿ ಧರಣಿ ಕೂತಿದ್ದು ವಿವಿಧ ಸಮಾಜಸೇವಾ ಸಂಘಟನೆಗಳು ಬೆಂಬಲಕ್ಕೆ ನಿಂತಿವೆ.
ಸೋಮವಾರ ಮುಂಜಾನೆ ಧರಣಿ ಪ್ರಾರಂಭವಾಗಿದ್ದು ಈ ವೇಳೆ ಮಾತಾಡಿದ ಆಸೀಫ್ ಅವರು, "ಕೆಲವೇ ಕಿ.ಮೀ. ಅಂತರದಲ್ಲಿ ಎನ್ಐ ಟಿಕೆ ಮತ್ತು ಹೆಜಮಾಡಿ ಟೋಲ್ ಗೇಟ್ ಗಳನ್ನು ಹೆದ್ದಾರಿ ಪ್ರಾಧಿಕಾರ ನಿರ್ಮಾಣ ಮಾಡಿದ್ದು ಇದರಿಂದ ಜನಸಾಮಾನ್ಯರಿಗೆ ತೀರಾ ಸಮಸ್ಯೆಯಾಗುತ್ತಿದೆ. ಜಿಲ್ಲೆಯ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಕಳೆದ ಹಲವು ಸಮಯಗಳಿಂದ ಎನ್ಐಟಿಕೆ ಟೋಲ್ ಗೇಟ್ ರದ್ದಾಗುತ್ತದೆ ಎಂದು ಹೇಳಿಕೊಂಡೇ ಬರುತ್ತಿದ್ದಾರೆ. ಆದರೆ ಇಲ್ಲಿನ ಟೋಲ್ ಮಾತ್ರ ಮುಚ್ಚಿಲ್ಲ. ನಾನು ಈ ಹಿಂದೆ ಸೋಷಿಯಲ್ ಮೀಡಿಯಾದಲ್ಲಿ ಹೇಳಿದಂತೆಯೇ ಇಲ್ಲಿನ ಟೋಲ್ ವಿರುದ್ಧ ಅಹೋರಾತ್ರಿ ಹೋರಾಟಕ್ಕೆ ಇಳಿದಿದ್ದೇನೆ. ಟೋಲ್ ರದ್ದಾಗದ ಹೊರತು ಇಲ್ಲಿಂದ ವಾಪಾಸ್ ಹೋಗುವುದಿಲ್ಲ. ಎಂದರು
ಅವರು ಮಾತನಾಡಿ ಟೋಲ್ ಕಾರ್ಮಿಕರ ಗೂಂಡಾಗಿರಿ ಮಿತಿಮೀರಿದ್ದು ಕೂಡಲೇ ಇಲ್ಲಿನ ಟೋಲ್ ಗೇಟ್ ರದ್ದು ಪಡಿಸಿ ಜನರನ್ನು ನೆಮ್ಮದಿಯಿಂದ ಉಸಿರಾಡಲು ಬಿಡಿ" ಎಂದು ಅಗ್ರಹಿಸಿದರು.
ಧರಣಿಯಲ್ಲಿ ಪಾಲ್ಗೊಂಡ ಮುಲ್ಕಿ ನಾಗರಿಕ ಹೋರಾಟ ಸಮಿತಿಯ ಹರೀಶ್ ಪುತ್ರನ್ ಕಾನೂನುಬಾಹಿರ ಟೋಲ್ ರದ್ದುಪಡಿಸುವಂತೆ ಆಗ್ರಹಿಸಿ ದರು
ಎಸ್ ಡಿಪಿಐ ಮೂಲ್ಕಿ ಮೂಡಬಿದ್ರೆ ವಲಯ ಅಧ್ಯಕ್ಷ ಅಶ್ರಫ್ ಕೋಟೆಬಾಗಿಲು, ರಿಲಯನ್ಸ್ ಬೊಳ್ಳೂರು ಸಂಘಟನೆ ಮುಖಂಡ ಹಾರಿಸ್ ಇಂದಿರಾನಗರ, ಲಾರಿ ಮಾಲಕರ ಸಂಘದ ಅಧ್ಯಕ್ಷ ಸುಶಾಂತ್ ಶೆಟ್ಟಿ, ಕರವೇ ಜಿಲ್ಲಾಧ್ಯಕ್ಷ ಮನ್ಸೂರ್ ಅಹ್ಮದ್, ಸಮಾಜ ಸೇವಕ ನಿಜಾಮ್ ಪಡುಬಿದ್ರೆ, ಜೆ. ಶ್ರೀಯಾನ್, ಪ್ರಶಾಂತ್ ಕಾಂಚನ್ ಕೊಲ್ನಾಡ್ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
07/02/2022 01:22 pm