ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೂಡುಬಿದಿರೆ: ಬಸ್ಟ್ಯಾಂಡ್ ಸಮಸ್ಯೆಗಳ ಆಗರ!

ವರದಿ: ವೈಶಾಲಿ ಶೆಟ್ಟಿ, ಪೂವಾಳ

ಮೂಡುಬಿದಿರೆ: ತೂತು ಬಿದ್ದಿರುವ ತಗಡಿನ ಸೀಟುಗಳು. ಕಸಗಳ ರಾಶಿಗಳ ನಡುವೆ ಮತ್ತಿನಲ್ಲಿ ತೇಲಾಡುವ ಕುಡುಕರು. ಈಗಲೋ ಆಗಲೋ ಮುರಿದು ಬೀಳುವ ಕಬ್ಬಿಣದ ಕಂಬ. ಭಿಕ್ಷುಕರ ವೈವಾಟಿಗೆಂದೇ ನಿರ್ಮಾಣವಾದ ತಾಣವಾಗಿರುವುದು ಮೂಡುಬಿದಿರೆ ಬಸ್ ನಿಲ್ದಾಣ.

ಸುಮಾರು 20 ವರ್ಷಗಳ ಹಿಂದೆ ಸ್ಥಾಪನೆಗೊಂಡ ಮೂಡುಬಿದಿರೆ ಬಸ್ ನಿಲ್ದಾಣ ವಿಶಾಲವಾಗಿದ್ದು, ವ್ಯಾಪಾರ ವೈವಾಟುಗಳು ಭರ್ಜರಿಯಿಂದ ಸಾಗುತಿದೆ. ಒಂದು ಕಡೆ ಬಿಕ್ಷುಕರ ಹಾವಳಿಯಾದರೆ ಮತ್ತೊಂದೆಡೆ ಕುಡಿದ ಅಮಲಿನಲ್ಲಿ ತೇಲಾಡುವ ಕುಡುಕರು. ವಾಂತಿ, ಊಟದ ತ್ಯಾಜ್ಯ, ಉಗುಳುವುದರಿಂದ ಬಸ್ ನಿಲ್ದಾಣವು ಅಸಹ್ಯದಿಂದ ಕೂಡಿದೆ. ಇದರಿಂದ ಪ್ರಯಾಣಿಕರು, ಅದರಲ್ಲೂ ಮಹಿಳೆಯರು ತೊಂದರೆ ಅನುಭವಿಸುವಂತಾಗಿದೆ.

ಮಳೆಗಾಲದಲ್ಲಿ ಬಸ್ ನಿಲ್ದಾಣದಲ್ಲಿ ಆಶ್ರಯ ಪಡೆಯುವ ಪ್ರಯಾಣಿಕರನ್ನು ಮಳೆ ನೀರು ಒದ್ದೆಯಾಗಿಸುತ್ತದೆ.

ಸಂಜೆ ಆದ ಮೇಲೆ ನೀರವ ಮೌನ ಆವರಿಸುವ ಇಲ್ಲಿ ವಿದ್ಯುತ್ ಪೂರೈಕೆ ಇಲ್ಲದೆ ಪ್ರಯಾಣಿಕರು ರಾತ್ರಿ ಸಮಯದಲ್ಲಿ ಅಲ್ಲಿ ನಿಲ್ಲಲೂ ಕಷ್ಠಕರವಾದ ಪರಿಸ್ಥತಿ ಬಂದೊದಗುತ್ತದೆ. ಕುಳಿತು ಕೊಳ್ಳುವ ಆಸನ ಕೂಡ ಮುರಿದು ಬಿದ್ದಿದೆ.

ಇನ್ನು ಮೂಡುಬಿದಿರೆ ನಿಲ್ದಾಣಕ್ಕೆ ಬರುವ ಬಸ್ಸುಗಳ ಅಡಿ ಭಾಗ ಶೇಕಡಾ ೯೦ರಷ್ಟು ಭೂಮಿಗೆ ಸೋಕುತ್ತಿದ್ದು, ಬಹಳ ಎತ್ತರವಾಗಿ ಬಸ್ ತಂಗುದಾಣ ನಿರ್ಮಾಣಗೊಂಡಿದೆ.

ಬಸ್ಟ್ಯಾಂಡ್ ನ ಬದಿಯಲ್ಲಿ ಶೌಚಾಲಯ, ನೀರಿನ ಸೌಲಭ್ಯದ ವ್ಯವಸ್ಥೆ ಕಲ್ಪಿಸಿದ್ದರೂ ಪೂರೈಕೆ ಆಗ್ತಾ ಇಲ್ಲ. ಬಸ್ಸು ನಿಲ್ಲುವ ತಂಗುದಾಣ ಕೇವಲ ಬಸ್ಸು ನಿಲ್ಲದೆ, ಅಲ್ಲಲ್ಲಿ ದ್ವಿಚಕ್ರ ವಾಹನಗಳ ಹಾವಳಿ. ಆಸುಪಾಸಿನಲ್ಲಿ ೧೦೦ ಕ್ಕಿಂತಲೂ ಅಧಿಕ ಮಳಿಗೆಗಳನ್ನು ನಿರ್ಮಾಣ ಮಾಡಿ ಸುತ್ತಲೂ ವಾಹನಗಳ ನಿಲ್ದಾಣಗಳು.

ಒಟ್ಟಾರೆಯಾಗಿ ಮೂಡುಬಿದಿರೆ ಬಸ್ ನಿಲ್ದಾಣ ಅವ್ಯವಸ್ಥೆ ಯ ಆಗರವಾಗಿದ್ದು, ಅಧಿಕಾರಿಗಳು ಕಣ್ಣು ಕಣ್ಣು ಮುಚ್ಚಿ ಕುಳಿತುಕೊಂಡಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

06/02/2022 07:02 pm

Cinque Terre

8.48 K

Cinque Terre

0

ಸಂಬಂಧಿತ ಸುದ್ದಿ