ಬಜಪೆ : ಬಜಪೆಯಿಂದ ಕೈಕಂಬ ಕ್ಕೆ ಸಾಗುವ ರಸ್ತೆಯ ಅಂಬಿಕಾ ನಗರದಿಂದ ಪಡುಪೆರಾರದವರೆಗೆ ರಾಜ್ಯ ಹೆದ್ದಾರಿಯಲ್ಲಿ ರಸ್ತೆಯ ಬದಿಗಳಲ್ಲಿ ತ್ಯಾಜ್ಯದ ರಾಶಿ, ಪ್ಲಾಸ್ಟಿಕ್ ತ್ಯಾಜ್ಯಗಳಿಂದ ತುಂಬಿಹೋಗಿ ದುರ್ವಾಸನೆ ಬೀರುತಿದ್ದು,ಸಾರ್ವಜನಿಕರಿಗೆ ಬಹಳಷ್ಟು ತೊಂದರೆಯಾಗಿದೆ. ರಸ್ತೆ ಬದಿ ತ್ಯಾಜ್ಯ ಬಿಸಾಡುವುದರಿಂದ ತ್ಯಾಜ್ಯ ನಿರ್ವಹಣೆ ಮಾಡುವುದೇ ಸಂಬಂಧಪಟ್ಟ ಪಂಚಾಯತ್ ಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಅಲ್ಲದೆ ಕೆಲ ತಿಂಗಳುಗಳ ಹಿಂದೆ ರಸ್ತೆ ಬದಿಯಲ್ಲಿ ಕಸ ಎಸೆಯುತ್ತಿದ್ದ ವ್ಯಕ್ತಿಯೊಬ್ಬರಿಗೆ ಸಂಬಂಧಪಟ್ಟ ಪಂಚಾಯತ್ ದಂಡ ಕೂಡ ವಿಧಿಸಿದೆ.
ಅದರೂ ರಸ್ತೆಬದಿಯಲ್ಲಿ ಮೂಟೆ ಮೂಟೆ ತ್ಯಾಜ್ಯಗಳು ಬಿದ್ದಿದ್ದು, ದಿನ ದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ.ಇಲ್ಲಿ ಗ್ರಾಮ ಪಂಚಾಯತ್ ಎಚ್ಚರಿಕೆಯ ನಾಮ ಫಲಕ ಹಾಕಿದ್ದರೂ ಯಾವುದೇ ಪ್ರಯೋಜನವಿಲ್ಲದಂತಾಗಿದೆ.ಈ ಪ್ರದೇಶದಲ್ಲಿ ತ್ಯಾಜ್ಯ ತಂದು ಹಾಕುತ್ತಿರುವುದು ಮಾತ್ರ ಮುಂದುವರಿದಿದೆ.ಕಸ ಹಾಕುವವರನ್ನು ಹಿಡಿದು ಕಠಿಣ ಕ್ರಮ ಕೈಗೊಳ್ಳಬೇಕಾಗಿದೆ. ಈ ಬಗ್ಗೆ ಕಟ್ಟುನಿ ಟ್ಟಿನ ಕ್ರಮಕೈಗೊಂಡು ದುರ್ವಾಸನೆಯಿಂದ ಮುಕ್ತಿ ನೀಡುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
Kshetra Samachara
06/02/2022 12:26 pm