ಮುಲ್ಕಿ: ಹಳೆಯಂಗಡಿ ಹಾಗೂ ಪಕ್ಷಿಕೆರೆ ನಡುವಿನ ಪ್ರಧಾನ ಸಂಪರ್ಕ ರಸ್ತೆಯ ಇಂದಿರಾನಗರದ ರೈಲ್ವೇ ಕ್ರಾಸಿಂಗನ್ನು ಕೊಂಕಣ ರೈಲ್ವೆ ಕಾರ್ಪೊರೇಷನ್ ಅಮಿಟೆಡ್ ಸಂಸ್ಥೆಯು ಕಾಮಗಾರಿಯ ಪ್ರಯುಕ್ತ ಜನವರಿ 21 ಹಾಗೂ 22 ರಂದು ಎರಡು ದಿನ ಬಂದ್ ಮಾಡಲಿದೆ.
ರೈಲ್ವೇ ಹಳಿ ಹಾಗೂ ಹಳಿಯ ಕೆಳಗೆ ಅಳವಡಿಸುವ ಸಿಮೆಂಟ್‌ನ ಪಟ್ಟಿಯನ್ನು ಹೊಸದಾಗಿ ಅಳವಡಿಸುವ ಕಾಮಗಾರಿಯು ನಡೆಯಲಿರುವುದರಿಂದ ಜ, 21 ರಂದು ಬೆಳಗ್ಗೆ 9 ಗಂಟೆಯಿಂದ ಜ.22ರ ಸಂಜೆ 5ರ ವರೆಗೆ ಕ್ರಾಸಿಂಗ್‌ನ್ನು ಸಂಪೂರ್ಣವಾಗಿ ಬಂದ್ ಮಾಡುವುದರಿಂದ ಸಂಚಾರಿಗಳು ಬದಲಿ ಮಾರ್ಗವನ್ನು ಬಳಸಿಕೊಳ್ಳಲು ಸೂಚಿಸಲಾಗಿದೆ ಎಂದು ಕೊಂಕಣ್ ರೈಲ್ವೇಯ ಸಾರ್ವಜನಿಕ ಸಂಪರ್ಕಾಧಿಕಾರಿ ಸುಧಾ ಕೃಷ್ಣಮೂರ್ತಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ರೈಲ್ವೇ ಕ್ರಾಸಿಂಗ್‌ನ ಸುರಕ್ಷತೆಗಾಗಿ ಹಾಗೂ ಈಗಾಗಲೇ ಸಂಬಂಧಿತ ಗ್ರಾಮ ಪಂಚಾಯತ್ ಹಾಗೂ ಮುಲ್ಕಿ ಪೊಲೀಸ್ ಠಾಣೆ, ಸಂಚಾರಿ ಠಾಣೆಗೆ ಮಾಹಿತಿ ನೀಡಿದ್ದು ಸೂಚನಾ ಫಲಕವನ್ನು ಸ್ಥಳದಲ್ಲಿ ಜ. 20ರಂದೇ ಅಳವಡಿಸಲಾಗಿದೆ, ಈ ಬಗ್ಗೆ ಸಾರ್ವಜನಿಕರು ಸಹಕರಿಸಬೇಕು ಎಂದು ಅವರು ಪಬ್ಲಿಕ್ ನೆಕ್ಸ್ಟ್ ಮೂಲಕ ವಿನಂತಿಸಿದ್ದಾರೆ.
Kshetra Samachara
20/01/2022 10:56 pm