ಮಣಿಪಾಲ: ಮಣಿಪಾಲದ ಆರ್ ಎಸ್ ಬಿ ಸಭಾಭವನ ಸಂಪರ್ಕಿಸುವ ರಸ್ತೆಯಲ್ಲಿ ಕುಡಿಯುವ ನೀರಿನ ಕೊಳವೆ ಒಡೆದು ನೀರು ಪೋಲಾಗಿ ರಸ್ತೆಯಲ್ಲಿ ಹರಿಯುತ್ತಿದೆ. ಇಲ್ಲಿ ರಸ್ತೆ ಅಗಲೀಕರಣ ಕಾಮಗಾರಿ ನಡೆಯುತ್ತಿದ್ದು ,ಹೊಂಡ ತೆಗೆಯುವ ಸಂದರ್ಭ ಪೈಪ್ ತುಂಡಾಗಿರುವ ಸಾಧ್ಯತೆ ಇದೆ.ಇದೀಗ ಕುಡಿಯುವ ನೀರು ರಸ್ತೆ ತುಂಬ ಹರಿಯುತ್ತಿದೆ. ಇದುವರೆಗೆ ದುರಸ್ತಿ ಕಾರ್ಯ ನಡೆದಿಲ್ಲ. ತಕ್ಷಣ ನಗರಸಭೆ ಅಧಿಕಾರಿಗಳು ಸ್ಪಂದಿಸಿ ಸರಿಪಡಿಸುವಂತೆ ನಗರಸಭೆಯ ಮಾಜಿ ಸದಸ್ಯ ನಿತ್ಯಾನಂದ ಒಳಕಾಡು ಅವರು ಆಗ್ರಹಿಸಿದ್ದಾರೆ.
Kshetra Samachara
08/01/2022 12:23 pm