ಕಾಪು : ರಾಷ್ಟ್ರೀಯ ಹೆದ್ದಾರಿ 66 ಕಟಪಾಡಿ ಜಂಕ್ಷನ್ನಲ್ಲಿ ವಾಹನ ದಟ್ಟಣೆಯಿಂದ ಹಲವು ಗಂಟೆಗಳ ಕಾಲ ಟ್ರಾಫಿಕ್ ಜಾಮ್ ಉಂಟಾಯಿತು.
ವಿಕೇಂಡ್ ರಜೆ, ಕ್ರಿಸ್ಮಸ್ ಸಂಭ್ರಮ, ಶುಭ ಸಮಾರಂಭಗಳ ಭರಾಟೆಯಿಂದಾಗಿ ವಾಹನ ಸವಾರರಿಗೆ ಟ್ರಾಫಿಕ್ ಜಾಮ್ ಬಿಸಿ ತಟ್ಟಿದೆ.
ಕಟಪಾಡಿ ಜಂಕ್ಷನ್ ನಿಂದ ಹಲವು ಕಿಲೋ ಮಿ ಉದ್ದಕ್ಕೆ ವಾಹನಗಳ ಸರತಿ ಸಾಲು ಕಂಡು ಬಂತು. ಟ್ರಾಫಿಕ್ ಜಾಮ್ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.
ಕಾಪು ಎಸ್.ಐ.ರಾಘವೇಂದ್ರ, ತಿಮ್ಮೇಶ್, ಎಸ್.ಎಸ್.ಐ ಬಾಲಚಂದ್ರ, ಸೇರಿದಂತೆ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.
Kshetra Samachara
26/12/2021 05:27 pm