ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಯಕ್ಷಗಾನ ಕಲಾವಿದರಿಗೆ ಬಸ್ ಪಾಸ್ ವಿತರಣೆ

ಉಡುಪಿ: ಜಿಲ್ಲೆಯ ಯಕ್ಷಗಾನ‌ ಕಲಾವಿದರಿಗೆ ಬಹುದಿನಗಳ ಬೇಡಿಕೆಯಾದ ಬಸ್ ಪಾಸ್ ನ್ನು ಇವತ್ತು ಸಾಂಕೇತಿಕವಾಗಿ ವಿತರಿಸಲಾಯಿತು. ತೆಂಕು‌ ಮತ್ತು ಬಡಗುತಿಟ್ಟಿನ ಮೂವತ್ತಕ್ಕೂ ಹೆಚ್ಚು ಮೇಳಗಳ ನಾಲ್ನೂರಕ್ಕೂ ಅಧಿಕ ಕಲಾವಿದರಿಗೆ ಇದರ ಪ್ರಯೋಜನ ಸಿಗಲಿದೆ.ಇವತ್ತು ಯಕ್ಷಗಾನ ಕಲಾರಂಗದಲ್ಲಿ ಹಿರಿಯ ಕಲಾವಿದ ಕೊಳ್ಯೂರು ರಾಮಚಂದ್ರ ರಾವ್ ಅವರು ಬಸ್ ಪಾಸ್ ನ್ನು ಕಲಾವಿದರಿಗೆ ಸಾಂಕೇತಿಕವಾಗಿ ಹಸ್ತಾಂತರಿಸಿದರು.ಯಕ್ಷಗಾನ ಕಲಾರಂಗದ ಮುರಲಿ ಕಡೆಕಾರ್ ಪ್ರಾಸ್ತಾವಿಕ ಮಾತನಾಡಿ ,ಇದರಿಂದ ನೂರಾರು ಕಲಾವಿದರಿಗೆ ಅನುಕೂಲವಾಗಲಿದೆ. ಕೆನರಾ ಬಸ್ ಮಾಲಕರ ಸಂಘದ ಈ ಉಪಕಾರಕ್ಕೆ ಋಣಿಯಾಗಿದ್ದೇವೆ ಎಂದರು.

Edited By : Manjunath H D
Kshetra Samachara

Kshetra Samachara

18/12/2021 01:12 pm

Cinque Terre

5.08 K

Cinque Terre

0