ಮುಲ್ಕಿ: ರಾಷ್ಟ್ರೀಯ ಹೆದ್ದಾರಿ 66ರ ಮುಲ್ಕಿ ಸಮೀಪದ ಕಾರ್ನಾಡು ಬೈಪಾಸ್ ಗುಂಡಾಲ್ ಗುತ್ತು ಹೆದ್ದಾರಿ ಬಳಿ ದಿನದಿಂದ ದಿನಕ್ಕೆ ತ್ಯಾಜ್ಯದ ರಾಶಿ ಗುಡ್ಡೆ ಯಂತಾಗಿದ್ದು ದುರ್ವಾಸನೆಯುಕ್ತ ವಾತಾವರಣ ಸೃಷ್ಟಿಯಾಗಿ ರೋಗಗಳ ಭೀತಿ ಎದುರಾಗಿದೆ ಎಂದು ಮುಲ್ಕಿ ನಗರ ಪಂಚಾಯತ್ ಸದಸ್ಯ ಹರ್ಷರಾಜ್ ಶೆಟ್ಟಿ ಆರೋಪಿಸಿದ್ದಾರೆ.
ಕಳೆದ ಕೆಲವು ತಿಂಗಳಿನಿಂದ ದುಷ್ಕರ್ಮಿಗಳು ಗುಂಡಾಲ್ ಗುತ್ತು ಹೆದ್ದಾರಿ ಬಳಿ ತ್ಯಾಜ್ಯ ಬಿಸಾಡುತ್ತಿದ್ದು ಈ ಬಗ್ಗೆ ಮುಲ್ಕಿ ನಗರ ಪಂಚಾಯತ್ ಹಾಗೂ ಸಂಬಂಧಪಟ್ಟ ಇಲಾಖೆಗೆ ದೂರು ನೀಡಲಾಗಿದೆ ಎಂದು ಹರ್ಷ ರಾಜ ಶೆಟ್ಟಿ ಹೇಳಿದ್ದಾರೆ.
ಶುಕ್ರವಾರ ಸಂಜೆ ಶಿಮಂತೂರು ಮೂಲದ ಗುತ್ತಿಗೆದಾರರೊಬ್ಬರು ಟೆಂಪೋದಲ್ಲಿ ತ್ಯಾಜ್ಯ ಸುರಿದಿದ್ದು ಸ್ಥಳೀಯರು ಆಕ್ಷೇಪ ಮಾಡಿ ಮುಲ್ಕಿ ನಗರ ಪಂಚಾಯತ್ ಗೆ ಕೂಡಲೇ ದೂರು ನೀಡಿದ್ದಾರೆ.ಈ ಸಂದರ್ಭ ಕಾರ್ಯಪ್ರವೃತ್ತರಾದ ಮುಲ್ಕಿ ನಪಂ ಮುಖ್ಯಾಧಿಕಾರಿ ಚಂದ್ರಪೂಜಾರಿ ಕಾರ್ಯಾಚರಣೆ ನಡೆಸಿ ತ್ಯಾಜ್ಯ ಸುರಿದ ಗುತ್ತಿಗೆದಾರರಿಂದಲೇ ತ್ಯಾಜ್ಯವನ್ನು ತೆಗೆಸಿದ್ದು ಎಚ್ಚರಿಕೆ ನೀಡಿದ್ದಾರೆ.
ಈ ಪರಿಸರದಲ್ಲಿ ಮತ್ತೆ ತ್ಯಾಜ್ಯ ಎಸೆದರೆ ಪೊಲೀಸರಿಗೆ ದೂರು ನೀಡುವುದಲ್ಲದೆ ದಂಡ ವಿಧಿಸಲಾಗುವುದು ಎಂದು ಮುಲ್ಕಿ ನಪಂ ಮುಖ್ಯಾಧಿಕಾರಿ ಚಂದ್ರಪೂಜಾರಿ ಹೇಳಿದ್ದಾರೆ.
Kshetra Samachara
18/12/2021 09:03 am