ಉಡುಪಿ: ಉಡುಪಿ ನಗರ ಬೆಳೆಯುತ್ತಲೇ ಇದ್ದು ,ವಾಹನಗಳ ಸಂಖ್ಯೆಯೂ ದ್ವಿಗುಣಗೊಳ್ಳುತ್ತಿದೆ. ಹೀಗಾಗಿ ನಗರದಲ್ಲಿ ನಿತ್ಯ ಟ್ರಾಫಿಕ್ ನದ್ದೇ ಸಮಸ್ಯೆ.ಒಂದೆಡೆ ರಸ್ತೆಗಳು ಹದಗೆಟ್ಟು ಹೋಗಿದ್ದು ,ವಾಹನ ಸವಾರರು ಪರದಾಡಬೇಕಾದ ಪರಿಸ್ಥಿತಿ ಇದೆ.ಇನ್ನೊಂದೆಡೆ ನಗರದಲ್ಲಿ ಸೂಕ್ತ ಪಾರ್ಕಿಂಗ್ ವ್ಯವಸ್ಥೆಯೇ ಇಲ್ಲ.ಇನ್ನು ನಗರದಲ್ಲಿ ಅಲ್ಲಲ್ಲಿ ರಿಕ್ಷಾ ನಿಲ್ಧಾಣಗಳು ತಲೆ ಎತ್ತುತ್ತಿದ್ದು ಹೊಸ ತಲೆ ನೋವಿಗೆ ಕಾರಣವಾಗಿದೆ.
ಉಡುಪಿಯ ಸಿಟಿಬಸ್ ಹಾಗೂ ನರ್ಮ್ ಬಸ್ ನಿಲ್ದಾಣ ಅಕ್ಕ ಪಕ್ಕದಲ್ಲೇ ರಿಕ್ಷಾ ತಂಗುದಾಣಗಳಿವೆ. ಸಿಟಿ ಬಸ್ ನಿಲ್ದಾಣದ ಪಕ್ಕದಲ್ಲಿ ರಿಕ್ಷಾ ನಿಲ್ದಾಣ ಇದ್ದು ಇದೀಗ ನರ್ಮ್ ಬಸ್ ನಿಲ್ದಾಣದ ಎದುರುಗಡೆ ರಿಕ್ಷಾ ನಿಲುಗಡೆ ಮಾಡಲಾಗುತ್ತಿದ್ದು ಇದರಿಂದ ವಾಹನ ಸವಾರರಿಗೆ ಹಾಗೂ ಪಾದಚಾರಿಗಳಿಗೆ ಸಾಕಷ್ಟು ತೊಂದರೆ ಆಗುತ್ತಿದೆ. ಇನ್ನು ಪಾರ್ಕಿಂಗ್ ಗೆ ಸ್ಥಳ ಇಲ್ಲದೇ ಇರುವುದರಿಂದ ರಸ್ತೆಯಲ್ಲೇ ವಾಹನಗಳನ್ನು ನಿಲುಗಡೆ ಮಾಡಲಾಗುತ್ತಿದ್ದು ನಗರದಲ್ಲಿ ಸಂಚರಿಸುವ ಜನರಿಗೆ ಸಮಸ್ಯೆಯಾಗಿ ಪರಿಣಮಿಸಿದೆ.ನಗರಸಭೆ ಮತ್ತು ಸ್ಥಳೀತಾಡಳಿತ ಈ ಅವ್ಯವಸ್ಥೆ ಸರಿಪಡಿಸುವಂತೆ ನಾಗರೀಕರು ಆಗ್ರಹಿಸಿದ್ದಾರೆ.
Kshetra Samachara
14/12/2021 01:16 pm