ಉಡುಪಿ: ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ನ.10ಕ್ಕೆ ಪೂರ್ವಾನ್ವಯವಾಗುವಂತೆ ಎಕ್ಸ್‌ಪ್ರೆಸ್, ಷಟಲ್ ಬಸ್ ದರ ಪರಿಷ್ಕರಿಸಿದೆ. ಇದರಿಂದಾಗಿ ಪ್ರಯಾಣಿಕರಿಗೆ ಮತ್ತೊಮ್ಮೆ ದರ ಏರಿಕೆ ಬಿಸಿ ತಟ್ಟಿದೆ.
ಎಕ್ಸ್‌ಪ್ರೆಸ್ ಬಸ್ಸಿನಲ್ಲಿ ಮಂಗಳೂರು-ಉಡುಪಿ ಪ್ರಯಾಣಕ್ಕೆ 10 ರೂ. ಏರಿಕೆಯಾಗಿ, 78 ರೂ. ಪಾವತಿ ಮಾಡಬೇಕಿದೆ. ಹೊಸ ದರ ಪಟ್ಟಿ ಪ್ರಕಾರ ಎಕ್ಸ್ ಪ್ರೆಸ್, ಷಟಲ್ ಬಸ್‌ಗಳಿಗೆ 6.5 ಕಿ.ಮೀ. ವರೆಗೆ 12 ರೂ.(ಹಿಂದಿನ ದರ 9 ರೂ.), 13 ಕಿ.ಮೀ.ವರೆಗೆ 19 ರೂ.(16), 19.5 ಕಿ.ಮೀ.ವರೆಗೆ 25 ರೂ. ಕಿ.ಮೀ.ವರೆಗೆ 40 ರೂ. (35), 39 ಕಿ.ಮೀ.ವರೆಗೆ 49 ರೂ.( 42), 45.5 ಕಿ.ಮೀ.ವರೆಗೆ 55 (48) ರೂ, 52 ಕಿ.ಮೀ.ವರೆಗೆ 63(55), 58 ಕಿ.ಮೀ. ವರೆಗೆ 70 (61)ರೂ.
65 ಕಿ.ಮೀ. ವರೆಗೆ 78(68) ರೂ., 71.5 ಕಿ.ಮೀ.ವರೆಗೆ 85(74), 84.5 ಕಿ.ಮೀ. ವರೆಗೆ 99(87), 97.5 ಕಿ.ಮೀ.ವರೆಗೆ 115(100) , 130 ಕಿ.ಮೀ. ವರೆಗೆ 152(133)ರೂ, 143 ಕಿ.ಮೀ.ವರೆಗೆ 168(146), 156 ಕಿ.ಮೀ.ವರೆಗೆ 183(159) ರೂ. ದರ ನಿಗದಿ ಮಾಡಲಾಗಿದೆ. ಕಳೆದ ವರ್ಷ ಅ.13 ರಿಂದ ಹೊಸದರ ನಿಗದಿ ಮಾಡಲಾಗಿತ್ತು. ಈ ವರ್ಷ ಮತ್ತೆ ದರ ಪರಿಷ್ಕರಣೆ ಮಾಡಲಾಗಿದ್ದು, ಪ್ರಯಾಣಿಕರ ಮೇಲೆ ಹೊರೆ ಹಾಕಲಾಗಿದೆ.
Kshetra Samachara
08/12/2021 12:11 pm