ಮುಲ್ಕಿ: ಮುಲ್ಕಿ ನಗರ ಪಂಚಾಯತ್ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 66ರ ಕೊಕ್ಕರ ಕಲ್ ಬಳಿ ಅದಾನಿ ಗ್ಯಾಸ್ಪೈಪ್ಲೈನ್ ನಿಧಾನಗತಿಯ ಕಾಮಗಾರಿಯಿಂದ ಸ್ಥಳೀಯರಿಗೆ ತೀವ್ರ ತೊಂದರೆ ಉಂಟಾಗಿದೆ.
ಅದಾನಿ ಗ್ಯಾಸ್ ಪೈಪ್ ಲೈನ್ ಕಾಮಗಾರಿ ಗೆಂದು ತಂದಿರುವ ಪೈಪುಗಳು ಕಳೆದ ಕೆಲ ತಿಂಗಳಿನಿಂದ ಹೆದ್ದಾರಿ ಬದಿಯಲ್ಲಿ ಬಿದ್ದುಕೊಂಡಿದ್ದು ಅಪಾಯಕಾರಿಯಾಗಿದೆ. ಈ ನಡುವೆ ನಿಧಾನಗತಿ ಕಾಮಗಾರಿಯಿಂದ ಮನೆ ಹಾಗೂ ಸ್ಥಳಿಯ ಹೋಟೆಲಿನ ಎದುರು ಭಾಗ ಕೆಸರು ಮಿಶ್ರಿತ ಕೆರೆ ನಿರ್ಮಾಣವಾಗಿದ್ದು ಈ ಭಾಗದಲ್ಲಿ ನಡೆದಾಡುವವರು ಕೆಸರು ನೀರಿಗೆ ಬಿದ್ದ ಘಟನೆ ನಡೆದಿದ್ದು ವ್ಯಾಪಾರ ವಹಿವಾಟಿಗೆ ತೀವ್ರ ತೊಂದರೆಯಾಗಿದೆ
ಎರ್ರಾಬಿರ್ರಿ ಕಾಮಗಾರಿಯಿಂದ ಪರಿಸರದ ಮನೆಯವರಿಗೆ ತೀವ್ರ ತೊಂದರೆ ಉಂಟಾಗಿದ್ದು ಮನೆಗೆ ಬರುವ ಸಂಬಂಧಿಕರನ್ನು ಕೆಸರು ಕೆಳಗೆ ಬೀಳದಂತೆ ಕಾಯುವ ಪರಿಸ್ಥಿತಿ ಬಂದಿದೆ ಎಂದು ಸ್ಥಳೀಯರಾದ ಯದೀಶ್ ಅಮೀನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಪಾಯ ಸಂಭವಿಸುವ ಮೊದಲೇ ಪೈಪ್ ಲೈನ್ ಕಾಮಗಾರಿ ಪೂರ್ತಿ ಗೊಳಿಸಬೇಕು ಹಾಗೂ ಕೊಕ್ಕರಕಲ್ ಕ್ಷೀರಸಾಗರ ಬಳಿಯಲ್ಲಿ ಕಳೆದ ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಸರ್ವಿಸ್ ರಸ್ತೆ ಪೂರ್ತಿ ಗೊಳಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ
ಕಳೆದ ಕೆಲ ತಿಂಗಳ ಹಿಂದೆ ಮೂಲ್ಕಿ ಬಸ್ ನಿಲ್ದಾಣದಲ್ಲಿ ಕೂಡ ಇದೇ ರೀತಿ ಅದಾನಿ ಗ್ಯಾಸ್ಪೈಪ್ಲೈನ್ ಕಾಮಗಾರಿಯಿಂದ ತೀವ್ರ ತೊಂದರೆ ಉಂಟಾಗಿದ್ದು ನಾಗರಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.
Kshetra Samachara
18/11/2021 07:03 pm