ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: 2000 ಗಡಿ ದಾಟಿದ ಕಮರ್ಷಿಯಲ್ ಸಿಲಿಂಡರ್ ದರ, ಹೋಟೆಲ್ ಉದ್ಯಮ ಅತಂತ್ರ

ಮಂಗಳೂರು: ಸತತ ಬೆಲೆ ಏರಿಕೆಯಿಂದ ಕಂಗೆಟ್ಟಿರುವ ದೇಶದ ಜನತೆ ಪೆಟ್ರೋಲ್ ,ಡಿಸೇಲ್ ದರ ಇಳಿಕೆಯಿಂದ ಕೊಂಚ ನಿಟ್ಟುಸಿರು ಬಿಡುವಂತಾಗಿದೆ.ಅದರೆ ಅಡುಗೆ ಅನಿಲ ದರ ಮಾತ್ರ ಏರುತ್ತಲೇ ಇದೆ. ಸಿಲಿಂಡರ್ ದರ ಏರಿಕೆ ಮಾಡಿ ಶಾಕ್ ನೀಡಿದೆ.ಕಳೆದ ತಿಂಗಳು ಗೃಹ ಬಳಕೆಯ ಎಲ್ ಪಿಜಿ ಸಿಲಿಂಡರ್ ಗಳ ಬೆಲೆಯಲ್ಲಿ ಹೆಚ್ಚಳವಾಗಿತ್ತು..ಇದೀಗ ಮತ್ತೆ ಕಮರ್ಷಿಯಲ್ ಗ್ಯಾಸ್ ರೂ 266 ಏರಿಕೆ ಕಂಡಿದೆ.ಈ ಬೆಲೆ ಏರಿಕೆಯಿಂದ ಕಮರ್ಷಿಯಲ್ ಸಿಲಿಂಡರ್ ದರ 2000 ದಾಟಿದ್ದು, ಬೆಲೆ ಏರಿಕೆಯಿಂದ ಬೀದಿ ಬದಿಯ ವ್ಯಾಪಾರಸ್ಥರು ಪರದಾಡುವಂತಾಗಿದೆ. ಈ ಬಗ್ಗೆ ಪಬ್ಲಿಕ್ ನೆಕ್ಸ್ಟ್ ಜೊತೆ ಅಳಲು ತೋಡಿಕೊಂಡಿದ್ದಾರೆ.

ಇಂಧನ ಬೆಲೆ ಹೆಚ್ಚಾಗಿದ್ದರಿಂದ ಕಳೆದ ಕೆಲ ತಿಂಗಳಿಂದ ದಿನಸಿ, ತರಕಾರಿ, ಅಡುಗೆ ಅನಿಲ ಸೇರಿದಂತೆ ಅನೇಕ ವಸ್ತುಗಳ ದರ ಏರಿದೆ. ಈಗ ವಾಣಿಜ್ಯ ಸಿಲಿಂಡರ್‌ ದರ ಹೆಚ್ಚಿಸುತ್ತಿದ್ದಂತೆ ಊಟ, ತಿಂಡಿ ಬೆಲೆ ಏರಿಕೆ ಮಾಡಿದರೆ ಹೋಟೆಲ್ ಗಳಿಗೆ ಬರುವ ಗ್ರಾಹಕರ ಸಂಖ್ಯೆ ಇಳಿಮುಖವಾಗುವ ಸಾಧ್ಯತೆಯೂ ಇದೆ. ಸಂಕಷ್ಟದಲ್ಲಿರುವ ಉದ್ಯಮ ಆಗ ಮತ್ತಷ್ಟು ನಷ್ಟ ಎದುರಿಸಬೇಕಾಗುತ್ತೆ ಎಂಬ ಆತಂಕ ವ್ಯಕ್ತಪಡಿಸಿದರು...

Edited By : Nagesh Gaonkar
Kshetra Samachara

Kshetra Samachara

06/11/2021 09:55 pm

Cinque Terre

23.67 K

Cinque Terre

10