ಮಂಗಳೂರು: ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕಡಬ ಕೊಯ್ಲಾ ದ ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರದಿಂದ ಹೆಚ್ಚುವರಿ ಹೆಣ್ಣು ಕರು/ಕಡಸುಗಳನ್ನು ಅಮೃತಸಿರಿ ಯೋಜನೆಯಡಿ ಫಲಾನುಭವಿಗಳಿಗೆ ವಿತರಿಸುವ ಕಾರ್ಯಕ್ರಮವು ಮಂಗಳೂರು ತಾಲೂಕಿನ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ *ಮುಖ್ಯ ಪಶುವೈದ್ಯಾಧಿಕಾರಿರವರ ಕಛೇರಿ ಆವರಣದಲ್ಲಿ ಶಾಸಕ ಡಾ.ಭರತ್ ಶೆಟ್ಟಿ ವೈ ರವರ ನೇತೃತ್ವದಲ್ಲಿ ನಡೆಯಿತು.
ಆಯ್ಕೆ ಸಮಿತಿಯ ಮೂಲಕ ಆಯ್ಕೆಯಾದ 10 ಫಲಾನುಭವಿಗಳಿಗೆ ಮಲೆನಾಡು ಗಿಡ್ಡ ದೇಶಿಯ ತಳಿಯ ಹೆಣ್ಣು ಕರು/ಕಡಸುಗಳನ್ನು ವಿತರಿಸಲಾಯಿತು. ಮಲೆನಾಡು ಗಿಡ್ಡ,ಕಡಸು/ಹಸು ಒಟ್ಟು ಮೌಲ್ಯದ ಶೇ 75 ರಷ್ಟನ್ನು ಸರ್ಕಾರ ಸಹಾಯಧನ ನೀಡಿದ್ದು, ಫಲಾನುಭವಿಗಳು ಶೇ.25 ರಷ್ಟನ್ನು ಭರಿಸುತ್ತಾರೆ. ಕಾರ್ಯಕ್ರಮದಲ್ಲಿ ಪಶುಪಾಲನ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕರಾದ ಡಾ.ಟಿ.ಜಿ.ಪ್ರಸನ್ನ ಕುಮಾರ್, ಹಾಗೂ ಮಂಗಳೂರು ತಾಲೂಕು ಮುಖ್ಯ ಪಶುವೈದ್ಯಾಧಿಕಾರಿಯವರಾದ ಡಾ.ಕೆ.ಶಿವಣ್ಣರವರು ಹಾಗೂ ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.
Kshetra Samachara
06/11/2021 06:30 pm