ಮುಲ್ಕಿ: ಹಳೆಯಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಾವಂಜೆ ಹೆದ್ದಾರಿ ಬದಿ ಹಾಗೂ ಸಾಗ್ ಪ್ರದೇಶದಲ್ಲಿ ಕಸದ ತ್ಯಾಜ್ಯ ತುಂಬಿ ರಸ್ತೆಯನ್ನು ನುಂಗಲು ಪ್ರಯತ್ನಿಸುತ್ತಿದ್ದು ದುರ್ವಾಸನೆಯುಕ್ತ ವಾತಾವರಣ ಸೃಷ್ಟಿಯಾಗಿದೆ.
ಪಂಚಾಯತಿಗೆ ಪ್ರತ್ಯೇಕ ತ್ಯಾಜ್ಯ ವಿಲೇವಾರಿ ಘಟಕ ಹಾಗೂ ತ್ಯಾಜ್ಯ ತೆರವುಗೊಳಿಸುವ ವಾಹನ ಮಂಜೂರಾಗಿದ್ದರೂ ತ್ಯಾಜ್ಯ ತೆರವುಗೊಳಿಸಲು ಮುಹೂರ್ತ ಇನ್ನೂ ಕೂಡಿ ಬಂದಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ
ಹಳೆಯಂಗಡಿಯಲ್ಲಿ ನೂತನ ಪಂಚಾಯಿತಿ ಆಡಳಿತಕ್ಕೆ ಬಂದರೂ ತ್ಯಾಜ್ಯ ವಿಲೇವಾರಿ ಸಮಸ್ಯೆ ಇನ್ನೂ ಬಗೆಹರಿದಿಲ್ಲ.
ಈ ನಡುವೆ ಪಂಚಾಯಿತಿಗೆ ನೂತನ ಅಭಿವೃದ್ಧಿ ಅಧಿಕಾರಿ ನೇಮಕವಾಗಿದ್ದು ಆದಷ್ಟು ಬೇಗ ಗ್ರಾಮ ಸಭೆ ನಡೆಸುವುದೇ ಅಲ್ಲದೆ ತ್ಯಾಜ್ಯ ತೆರವುಗೊಳಿಸಲು ಮುಂದಾಗಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ
Kshetra Samachara
27/10/2021 05:58 pm