ಉಡುಪಿ: ಬ್ಯಾಂಕ್ ಆಫ್ ಇಂಡಿಯಾ ಸ್ಥಳಾಂತರಿತ ಉಡುಪಿ ಶಾಖೆಯ ಉದ್ಘಾಟನೆ ಸೋಮವಾರದಂದು ನಡೆಯಲಿದೆ ಎಂದು ಬ್ಯಾಂಕ್ ನ ವ್ಯವಸ್ಥಾಪಕರು ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು ,ಓಪಲ್ ಎನ್‌ಕ್ಷೇವ್, ವಿದ್ಯಾ ಸಮುದ್ರ ರಸ್ತೆ, ಸಾಯಿ ರಾಧಾ ಟಿವಿಎಸ್ ಶೋರೂಂ ಹತ್ತಿರದ ಸ್ಥಳಾಂತರಿತ ಶಾಖೆಯನ್ನು ಅಕ್ಟೋಬರ್ 25 ರಂದು ಉಡುಪಿ ಶಾಸಕರು ಉದ್ಘಾಟಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಗ್ರಾಹಕ ಬಂಧುಗಳ ಸೇವೆಗೆ ಬ್ಯಾಂಕ್ ಸಿದ್ಧಗೊಂಡಿದ್ದು, ಗ್ರಾಹಕರು ಈ ಹಿಂದೆ ಕೊಟ್ಟಿರುವ ಸಹಕಾರವನ್ನು ಮುಂದೆಯೂ ನೀಡಬೇಕು ಎಂದು ಉಡುಪಿ ಶಾಖೆಯ ಪ್ರಬಂಧಕರಾದ ಉಮೇಶ್ ಜಿ.ಕೆ ಪತ್ರಿಕಾಗೋಷ್ಠಿ ಮೂಲಕ ವಿನಂತಿಸಿಕೊಂಡಿದ್ದಾರೆ.
Kshetra Samachara
23/10/2021 05:37 pm