ಮುಲ್ಕಿ: ಹಳೆಯಂಗಡಿ ಸಮೀಪದ ಸಸಿಹಿತ್ಲುಶ್ರೀ ಭಗವತೀ ದೇವಸ್ಥಾನದಲ್ಲಿ ಅಕ್ಟೋಬರ್ 27 ರಂದು ನಡೆಯುವ ಹೊಸಕ್ಕಿ ನಡಾವಳಿಯ ಪೂರ್ವಭಾವಿಯಾಗಿ ಕದಿಕೆ ಶ್ರೀ ಭಗವತೀ ಭಂಡಾರ ಮಂದಿರದಲ್ಲಿ "ಗೊನೆ ಮುಹೂರ್ತ" ನಡೆಯಿತು.
ಈ ಸಂದರ್ಭ ಸಸಿಹಿತ್ಲು ಶ್ರೀಭಗವತಿ ಕ್ಷೇತ್ರದ ಪ್ರಧಾನ ಅರ್ಚಕ ಹಾಗೂ ಅನುವಂಶಿಕ ಮೊಕ್ತೇಸರ ಶ್ರೀನಿವಾಸ ಯಾನೆ ಅಪ್ಪು ಪೂಜಾರಿ, ಗೋಪಾಲ ಪಾತ್ರಿ, ಶಿವಪ್ರಸಾದ್, ಗಣೇಶ ಪಾತ್ರಿ, ಆಡಳಿತ ಮೊಕ್ತೇಸರ ರಾಮಪ್ಪ ಮಾಸ್ಟರ್, ಆಡಳಿತ ಸಮಿತಿಯ ಅಧ್ಯಕ್ಷ ವಾಮನ್ ಇಡ್ಯಾ ಹಾಗೂ ಗುರಿಕಾರರು ಮತ್ತಿತರರು ಉಪಸ್ಥಿತರಿದ್ದರು.
Kshetra Samachara
18/10/2021 04:04 pm