ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ವರ್ಷವಾದರೂ ಮೀನುಗಾರರ ಕೈಗೆಟುಕದ ಪರಿಹಾರ

ಮಂಗಳೂರು: ಸಮುದ್ರದಲ್ಲಿ ಮೀನು ಹಿಡಿಯುವ ವೇಳೆ ಅವಘಡ ನಡೆದು ಮೃತ ಪಟ್ಟರೆ ಅಥವಾ ದೋಣಿ-ಬೋಟ್‌ ಗೆ ಹಾನಿಯಾದರೆ ಮೀನುಗಾರರಿಗೆ ಅಥವಾ ಅವರ ಕುಟುಂಬಕ್ಕೆ ತುರ್ತು ನೆರವಾಗುವ ನಿಟ್ಟಿನಲ್ಲಿ ಸರಕಾರವು "ಸಂಕಷ್ಟ ಪರಿಹಾರ ನಿಧಿ" ಯನ್ನು ಸ್ಥಾಪಿಸಿದೆ. ಆದರೆ, ಸಕಾಲದಲ್ಲಿ ಈ ಪರಿಹಾರ ಧನ ಸಿಗದೆ, ಸಂತ್ರಸ್ತರು ಕಂಗೆಟ್ಟಿದ್ದಾರೆ.

ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದೇ ವರ್ಷದಲ್ಲಿ 20ಕ್ಕೂ ಅಧಿಕ ನಾಡದೋಣಿ ಮತ್ತು ಬೋಟ್ದು ರಂತ ನಡೆದಿದೆ. ಈ ಸಂದರ್ಭ ಘೋಷಣೆಯಾದ ಪರಿಹಾರ ಮೊತ್ತಮೃತ ಪಟ್ಟವರ ಕುಟುಂಬಕ್ಕಾಗಲೀ ಅಥವಾ ನಷ್ಟಕ್ಕೊಳಗಾದವರಿಗೆ ಇನ್ನೂ ದೊರೆತಿಲ್ಲ! ಮೃತ ಪಟ್ಟವರ ಕುಟುಂಬಕ್ಕೆ ತುರ್ತು ಪರಿಹಾರವಾಗಿ 6 ಲಕ್ಷ ರೂ., ಹಾಗೇ ಎಂಜಿನ್-ಬಲೆ, ದೋಣಿ-ಬೋಟ್ ಗೆ ಹಾನಿ ಸಂಭವಿಸಿದರೆ ಅಂದಾಜು ಮೊತ್ತ ಲೆಕ್ಕ ಹಾಕಿ ಪರಿಹಾರ ನೀಡಲಾಗುತ್ತದೆ. ಕಠಿಣ ಮಾನದಂಡ ಹಾಗೂ ಮಂಜೂರು ಪ್ರಕ್ರಿಯೆ ವಿಳಂಬದಿಂದಾಗಿ ವರ್ಷ ದಾಟಿದರೂ ಪರಿಹಾರ ಮೊತ್ತ ಕೈ ಸೇರಿಲ್ಲ.

Edited By : Shivu K
Kshetra Samachara

Kshetra Samachara

28/09/2021 01:21 pm

Cinque Terre

8.64 K

Cinque Terre

0