ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಜಪೆ:ವಾರದ ಸಂತೆ ಪುನಾರಂಭ - ಗ್ರಾಹಕರ ಸಂಖ್ಯೆ ವಿರಳ

ಬಜಪೆ: ಕೋವಿಡ್ ಹಿನ್ನೆಲೆಯಲ್ಲಿ ಕಳೆದ ಮಾರ್ಚ್‌ನಿಂದ ರದ್ದಾಗಿದ್ದ ಬಜಪೆಯ ವಾರದ ಸಂತೆಯು ಇಂದು ಸೂಕ್ತ ವ್ಯವಸ್ಥೆಯೊಂದಿಗೆ ಪಟ್ಟಣದ ಮೈದಾನದಲ್ಲಿ ಆರಂಭಗೊಂಡಿತು.

ನೂರಕ್ಕೂ ಹೆಚ್ಚು ವ್ಯಾಪಾರಿಗಳು ಸಂತೆ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದರು. ವ್ಯಾಪಾರಿಗಳು ಸಂತೆಯಲ್ಲಿ ಕುಳಿತುಕೊಳ್ಳಲು ಬಜಪೆ ಪಟ್ಟಣ ಪಂಚಾಯತ್‌ನಿಂದ ಸ್ಥಳಗಳಲ್ಲಿ ಮಾರ್ಕಿಂಗ್ ಮಾಡಲಾಗಿತ್ತು. ಪ್ರತಿ ಸೋಮವಾರದಂದು ಬಜಪೆಯ ವಾರದ ಸಂತೆಯ ದಿನವಾಗಿದ್ದು, ಕಳೆದ ಏಳು ತಿಂಗಳುಗಳಿಂದ ಕೋವಿಡ್ ನಿಂದಾಗಿ ರದ್ದಾಗಿದ್ದ ವಾರದ ಸಂತೆಯು ಇದೀಗ ಮತ್ತೆ ಆರಂಭಗೊಂಡಿದ್ದರಿಂದ ವ್ಯಾಪಾರಿಗಳಲ್ಲಿ ಸಂತಸ ಮೂಡಿದೆ. ಬೆಳಿಗ್ಗೆ ಗ್ರಾಹಕರ ಸಂಖ್ಯೆ ವಿರಳವಾಗಿತ್ತು.

ಎಪಿಎಂಸಿ ಮಾರುಕಟ್ಟೆಯ ವ್ಯಾಪಾರಿಗಳು ಕೂಡ ಇದೇ ಸ್ಥಳದಲ್ಲಿ ವ್ಯಾಪಾರಕ್ಕೆ ಮುಂದಾಗಿದ್ದರಿಂದ ಕೆಲ ವ್ಯಾಪಾರಿಗಳು ಪ್ರತಿಭಟನೆಗೆ ಮುಂದಾಗಿದ್ದರು. ಅನುಮತಿ ಇಲ್ಲದೆ ನಡೆಯಲು ಮುಂದಾದ ಪ್ರತಿಭಟನೆಯನ್ನು ಬಜಪೆ ಪೊಲೀಸರು ಮಧ್ಯ ಪ್ರವೇಶಿಸಿ ತಿಳಿಗೊಳಿಸಿದ್ದಾರೆ. ಸಂತೆ ನಡೆಯುತ್ತಿರುವ ಸ್ಥಳಕ್ಕೆ ಬಜಪೆ ಪಟ್ಟಣ ಪಂಚಾಯತ್‌ನ ಮುಖ್ಯಾಧಿಕಾರಿ ಪೂರ್ಣಕಲಾ ವೈ.ಕೆ ಪರಿಶೀಲನೆ ನಡೆಸಿದ್ದಾರೆ. ಈ ಸಂದರ್ಭ ವರಿ ವಸೂಲಿಗಾರ ದೀಪಕ್ ಪೆರ್ಮುದೆ, ಪಟ್ಟಣ ಪಂಚಾಯತ್ ನ ಸಿಬ್ಬಂದಿ ಜೊತೆಗಿದ್ದರು.

Edited By : Nagesh Gaonkar
Kshetra Samachara

Kshetra Samachara

27/09/2021 07:45 pm

Cinque Terre

19.15 K

Cinque Terre

0