ಮಂಗಳೂರು: ಏರ್ ಇಂಡಿಯಾ ವಿಮಾನದ ಸಿಬ್ಬಂದಿಗಳಿಗೆ ಪ್ರಯಾಣಿಕರು ತರಾಟೆಗೆ ತೆಗೆದುಕೊಂಡಿರುವ ಘಟನೆ ಕೇರಳದ ಕ್ಯಾಲಿಕಟ್ ವಿಮಾನ ನಿಲ್ದಾಣದಲ್ಲಿ ನಡೆದಿದೆ.ಮಂಗಳೂರಿನಲ್ಲಿ ಲ್ಯಾಂಡ್ ಆಗಬೇಕಿದ್ದ ಏರ್ ಇಂಡಿಯಾ ವಿಮಾನ,ಕ್ಯಾಲಿಕಟ್ ನಲ್ಲಿ ಲ್ಯಾಂಡಿಗ್ ಆಗಿವೆ.ದುಬೈನಿಂದ ಮಂಗಳೂರು ಏರ್ ಪೋರ್ಟ್ ನತ್ತ ಹೊರಟಿದ್ದ ವಿಮಾನಗಳು ಕ್ಯಾಲಿಕಟ್ ನಲ್ಲಿ ಲ್ಯಾಂಡ್ ಆಗಿದ್ದು. ಈ ಪೈಕಿ ಒಂದು ವಿಮಾನ ಮಂಗಳೂರು ತಲುಪಿದರು ಟೇಕ್ ಆಫ್ ಆಗದೆ ಬಹಳಷ್ಟು ಸಮಯದಲ್ಲಿ ಆಕಾಶದಲ್ಲಿ ಹಾರಾಟ ನಡೆಸಿದೆ.
ವಿಮಾನದಲ್ಲಿ ಮಕ್ಕಳು ಮತ್ತು ಗರ್ಭಿಣಿಯರು ಇದ್ರೂ ಊಟ ,ತಿಂಡಿಯನ್ನ ಸರಿಯಾಗಿ ಕೊಡದೆ ನಿರ್ಲಕ್ಷ್ಯ ಮಾಡಿದ್ದಾರೆ ಎಂದು .ದಮಾಮ್ ನಿಂದ ಹೊರಟಿದ್ದ ವಿಮಾನದ ಪ್ರಯಾಣಿಕರು,ಕ್ಯಾಲಿಕಟ್ ವಿಮಾನ ನಿಲ್ದಾಣದಲ್ಲಿ ಏರ್ ಇಂಡಿಯಾ ಸಿಬ್ಬಂದಿಗಳನ್ನ ತರಾಟೆಗೆ ತೆಗೆದುಕೊಂಡಿದ್ದಾರೆ.ಮಂಗಳೂರಿನಲ್ಲಿ ಹವಾಮಾನ ವೈಪರೀತ್ಯ ಹಿನ್ನೆಲೆಯಲ್ಲಿ ವಿಮಾನ ಲ್ಯಾಂಡಿಂಗ್ ಅಗದೇ ಕ್ಯಾಲಿಕಟ್ ನಲ್ಲಿ ಪ್ರಯಾಣಿಕರನ್ನು ಇಳಿಸಲಾಗಿದೆ
Kshetra Samachara
25/09/2021 03:45 pm