ಉಡುಪಿ: ಕೇಂದ್ರ ರೈಲ್ವೆ ಹಾಗೂ ಸದರ್ನ್ ರೈಲ್ವೆ ವತಿಯಿಂದ ಕೊಂಕಣ ರೈಲ್ವೆ ಮಾರ್ಗವಾಗಿ ನಾಲ್ಕು ವಿಶೇಷ ರೈಲುಗಳು ಸಂಚಾರ ನಡೆಸಲಿದೆ. ಪುಣೆ ಜಂಕ್ಷನ್- ಎರ್ನಾಕುಲಂ ಜಂಕ್ಷನ್ ನಡುವೆ ವೀಕ್ಲಿ ಸೂಪರ್ ಫಾಸ್ಟ್ ಸ್ಪೆಷಲ್ ರೈಲು ಸಂಪೂರ್ಣ ಮೀಸಲು ಆಸನದೊಂದಿಗೆ ಸೆ.25ರಿಂದ ಮುಂದಿನ ಆದೇಶದ ವರೆಗೆ ಸಂಚರಿಸಲಿದೆ.
ಸೆ.25ರಿಂದ ನಂ.01197 ರೈಲು ಪ್ರತಿ ಶನಿವಾರ ಪುಣೆ ಜಂಕ್ಷನ್ ನಿಂದ ರಾತ್ರಿ 10.10ಕ್ಕೆ ಹೊರಟು ಸೋಮವಾರ ಬೆಳಗ್ಗೆ 3.20ಕ್ಕೆ ಎರ್ನಾಕುಲಂ ಜಂಕ್ಷನ್ ತಲುಪಲಿದೆ. ಸೆ.27ರಿಂದ ನಂ.01198 ಪ್ರತಿ ಸೋಮವಾರ ಎರ್ನಾಕುಲಂ ಜಂಕ್ಷನ್ ನಿಂದ ಸಂಜೆ 6.50ಕ್ಕೆ ಹೊರಟು ಮಂಗಳವಾರ ರಾತ್ರಿ 11.35ಕ್ಕೆ ಪುಣೆ ಜಂಕ್ಷನ್ ತಲುಪಲಿದೆ. ಕಾರವಾರ, ಕುಮಟಾ, ಮುರುಡೇಶ್ವರ, ಭಟ್ಕಳ, ಬೈಂದೂರು, ಕುಂದಾಪುರ, ಉಡುಪಿ, ಮಂಗಳೂರು ಸಹಿತ ನಾನಾ ನಿಲ್ದಾಣಗಳಲ್ಲಿ ನಿಲುಗಡೆ ಇರುತ್ತವೆ.
ಪುಣೆ ಜಂಕ್ಷನ್- ಎರ್ನಾಕುಲಂ ಜಂಕ್ಷನ್ ಮಧ್ಯೆ ಬೈ ವೀಕ್ಲಿ ಸೂಪರ್ ಫಾಸ್ಟ್ ಸ್ಪೆಷಲ್ ರೈಲು ಪೂರ್ಣ ಮೀಸಲು ಆಸನದೊಂದಿಗೆ ರೈಲು ಸಂಚಾರ ಸೆ.29ರಿಂದ ಆರಂಭವಾಗಲಿದೆ. ಸೆ.29ರಿಂದ ಪುಣೆ-ಎರ್ನಾಕುಲಂ ಜಂಕ್ಷನ್ ನಡುವೆ ಪ್ರತಿ ಭಾನುವಾರ ಮತ್ತು ಬುಧವಾರ ನಂ. 01150 ರೈಲು ಸಂಚರಿಸಲಿದೆ. ಅ.1ರಿಂದ ಎರ್ನಾಕುಲಂ-ಪುಣೆ ಜಂಕ್ಷನ್ ಮಾರ್ಗವಾಗಿ ಪ್ರತಿ ಮಂಗಳವಾರ ಮತ್ತು ಶುಕ್ರವಾರ ನಂ. 01149 ರೈಲು ಸಂಚಾರ ನಡೆಸಲಿದೆ. ಹೆಚ್ಚಿನ ಮಾಹಿತಿಗೆ www.enquiry.indianrail.gov.in ಸಂಪರ್ಕಿಸುವಂತೆ ರೈಲ್ವೆ ಪ್ರಕಟಣೆ ತಿಳಿಸಿದೆ.
Kshetra Samachara
20/09/2021 12:20 pm