ಕಡಬ: ಕೆಲ ದಿನಗಳ ಹಿಂದೆ ಕಡಬ ಪೇಟೆಯಲ್ಲಿ ಸಾಕುಪ್ರಾಣಿಗಳು ರಸ್ತೆಯಲ್ಲಿಯೇ ಅಡ್ಡಾಡುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿತ್ತು. ಅದಾದ ಬಳಿಕ ಸ್ಥಳೀಯ ಆಡಳಿತ ಮಂಡಳಿ ಮೈಕ್ ಮೂಲಕ ಸಾಕು ಪ್ರಾಣಿಯ ಮಾಲಕರುಗಳಿಗೆ ಎಚ್ಚರಿಕೆ ಕೂಡ ನೀಡಿದ್ದರು. ಆದರೆ ಇನ್ನೂ ಕೂಡ ಸಾಕು ಪ್ರಾಣಿಗಳಿಂದ ವಾಹನ ಸವಾರರಿಗೆ ಕಿರಿಕಿರಿ ಕಡಿಮೆಯಾಗಿರಲಿಲ್ಲ. ಇದೀಗ ವ್ಯಕ್ತಿಯೊಬ್ಬರು ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದು, ಆಡಿನ ಕುತ್ತಿಗೆಗೆ ಪ್ಲೇ ಕಾರ್ಡ್ ನೇತು ಹಾಕಿದ್ದು ಅದರಲ್ಲಿನ ಬರಹದಿಂದ ಆ ಆಡಿನ ಫೋಟೋ ವೈರಲ್ ಆಗಿದೆ.
ಕಡಬ ಪೇಟೆಯ ರಸ್ತೆಯಲ್ಲಿ ಸಂಚರಿಸುವ ಸವಾರರಿಗೆ ಇದೊಂದು ಬಲು ದೊಡ್ಡ ಸಮಸ್ಯೆಯೇ ಆಗಿದ್ದು ಆಡುಗಳಿಂದಾಗಿ ಕೆಲವು ಬೈಕ್ ಗಳ ಅಪಘಾತವೂ ನಡೆದಿದೆ.
ಈ ಕುರಿತಂತೆ ಸ್ಥಳೀಯಾಡಳಿತಕ್ಕೆ ಹಲವು ಬಾರಿ ಮನವಿ ಮಾಡಿದರೂ ಕ್ರಮ ಕೈಗೊಳ್ಳದ ಹಿನ್ನಲೆಯಲ್ಲಿ ಆಡಿನ ಕುತ್ತಿಗೆಗೆ ಪ್ಲೇ ಕಾರ್ಡ್ ಅಳವಡಿಸಿ ವಿಶೇಷ ಪ್ರತಿಭಟನೆ ಮಾಡಲಾಗಿದ್ದು, ಪ್ಲೇಕಾರ್ಡ್ ನಲ್ಲಿ "ಗತಿಯಿಲ್ಲದವರು ನನ್ನನ್ನು ಸಾಕಬೇಡಿ, ದಯಮಾಡಿ ಬೈಕ್ ಸವಾರರ ಸಾವಿಗೆ ನನ್ನ ಹೊಣೆ ಮಾಡಬೇಡಿ" ಎಂದು ಬರೆಯಲಾಗಿದೆ.
ಈ ವಿನೂತನ ಕ್ರಮದಿಂದಾದರೂ ಸಾಕು ಪ್ರಾಣಿಯ ಮಾಲೀಕರು ಎಚ್ಚೆತ್ತುಕೊಳ್ಳಲಿ. ಹಾಗೆಯೇ ಇನ್ನಾದರೂ ಈ ಸಾಕು ಪ್ರಾಣಿಗಳ ಕಿರಿಕಿರಿ ಕಡಿಮೆಯಾಗಲಿದೆಯಾ ಕಾದು ನೋಡಬೇಕಿದೆ.
Kshetra Samachara
16/09/2021 10:49 am