ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರ್ನಾಡು: ಸಾರ್ವಜನಿಕ ಚರಂಡಿಗೆ ತ್ಯಾಜ್ಯನೀರು ಬಿಡುತ್ತಿದ್ದ ಮನೆಯ ಮಾಲೀಕನಿಗೆ ನ.ಪಂ. ಮುಖ್ಯಾಧಿಕಾರಿ ಎಚ್ಚರಿಕೆ

ಪಬ್ಲಿಕ್ ನೆಕ್ಸ್ಟ್ ವರದಿ ಫಲಶ್ರುತಿ

ಮುಲ್ಕಿ: ಮುಲ್ಕಿ ನಗರ ಪಂಚಾಯತ್ ವ್ಯಾಪ್ತಿಯ ಕಾರ್ನಾಡು ಗಾಂಧಿ ಮೈದಾನ ಬಳಿ ರಾಜ್ಯ ಹೆದ್ದಾರಿ ಬದಿಯ ಚರಂಡಿಯಲ್ಲಿ ತ್ಯಾಜ್ಯ ನೀರು ತುಂಬಿತುಳುಕುತ್ತಿದ್ದು ವಾತಾವರಣ ಕಲುಷಿತವಾಗುತ್ತಿದೆ.

ತ್ಯಾಜ್ಯ ನೀರಿನಲ್ಲಿ ಕಸಕಡ್ಡಿಗಳು ನೀರಿನ ಬಾಟಲಿಗಳು ತೆರೆದ ಸ್ಥಿತಿಯಲ್ಲಿ ತೇಲುತ್ತಿದ್ದು ಕೊರೊನಾ ಜೊತೆಗೆ ಮಲೇರಿಯಾ ಡೆಂಗ್ಯೂ ಮಾರಕ ರೋಗಗಳ ಭೀತಿ ಎದುರಾಗಿದೆ ಎಂದು ಸಾರ್ವಜನಿಕರ ದೂರಿನ ಅನ್ವಯ ಪಬ್ಲಿಕ್ ನೆಕ್ಸ್ಟ್ ನಲ್ಲಿ ವರದಿ ಪ್ರಸಾರವಾಗಿದ್ದು ಕೂಡಲೇ ಮುಲ್ಕಿ ನಗರ ಪಂಚಾಯತ್ ಮುಖ್ಯಾಧಿಕಾರಿ ಚಂದ್ರಪೂಜಾರಿ ಮತ್ತು ಸಿಬ್ಬಂದಿ ನವೀನ್ ಚಂದ್ರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಈ ಸಂದರ್ಭ ಸ್ಥಳೀಯ ಮನೆಯ ಮಾಲೀಕ ಅಕ್ರಮವಾಗಿ ಪೈಪುಗಳನ್ನು ಜೋಡಿಸಿ ಮನೆಯ ತ್ಯಾಜ್ಯ ನೀರನ್ನು ಚರಂಡಿಯಲ್ಲಿ ಬಿಡುತ್ತಿರುವುದು ಬೆಳಕಿಗೆ ಬಂದಿದೆ.

ಕೂಡಲೇ ಮುಖ್ಯಾಧಿಕಾರಿಗಳು ಮನೆಯ ಮಾಲೀಕನನ್ನು ತರಾಟೆಗೆ ತೆಗೆದುಕೊಂಡು ಮನೆಯ ಮಾಲೀಕ ಅಕ್ರಮವಾಗಿ ಜೋಡಿಸಿದ್ದ ಪೈಪುಗಳನ್ನು ತೆರವುಗೊಳಿಸಿ ಆತನಿಗೆ ಎಚ್ಚರಿಕೆ ನೀಡಿದ್ದಾರೆ.

ಈ ಪರಿಸರದ ಹೆದ್ದಾರಿ ಬದಿಯಲ್ಲಿ ಮಳೆ ನೀರು ಹರಿದು ಹೋಗಲು ಸೂಕ್ತ ಚರಂಡಿ ವ್ಯವಸ್ಥೆ ಯಾಗಬೇಕು ಎಂದು ಸ್ಥಳೀಯರು ಮುಖ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ

Edited By : Manjunath H D
Kshetra Samachara

Kshetra Samachara

01/09/2021 05:23 pm

Cinque Terre

17.28 K

Cinque Terre

0

ಸಂಬಂಧಿತ ಸುದ್ದಿ