ಮುಲ್ಕಿ: ವಿಶ್ವದಲ್ಲಿ ಹೆಸರುವಾಸಿಯಾದ ಕಟೀಲು ಶ್ರೀದುರ್ಗಾಪರಮೇಶ್ವರೀ ದೇವ ಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ದಿನಕ್ಕೆ ಸಾವಿರಾರು ವಾಹನಗಳು ಹೋರಾಟ ನಡೆಸುತ್ತಿರುವ ಕಟೀಲು- ಬಜಪೆ ಮಂಗಳೂರು ಸಂಪರ್ಕ ಕಲ್ಪಿಸುವ 82 ವರ್ಷಗಳ ಹಳೆಯ ಸೇತುವೆಗೆ ಕಾರ್ಯಕಲ್ಪ ಒದಗಿಸಬೇಕು ಎಂದು ಸ್ಥಳೀಯರು ಸಂಬಂಧಪಟ್ಟ ಆಡಳಿತವನ್ನು ಒತ್ತಾಯಿಸಿದ್ದಾರೆ
ಕಟೀಲು ಸೇತುವೆಯಲ್ಲಿ ಕಿನ್ನಿಗೋಳಿ-ಕಟೀಲು ಬಜಪೆ ಮಂಗಳೂರು ಮಾರ್ಗವಾಗಿ ದಿನಂಪ್ರತಿ ಓಡಾಡುವ ವಾಹನಗಳ ಸಂಖ್ಯೆ ದಿನೇ ದಿನೇ ಹೆಚ್ಚಾ ಗುತ್ತಿದೆ. ಈ ಕಾರಣಕ್ಕಾಗಿ ಸೇತುವೆಯನ್ನು ವಿಸ್ತರಿಸುವ ಅಥವಾ ನೂತನ ಸೇತುವೆ ನಿರ್ಮಿಸುವ ಕಾರ್ಯ ಅಗತ್ಯವಿದೆ.
ಕಟೀಲು ಸೇತುವೆ 1939 ಅಕ್ಟೋಬರ್ 9ರಂದು ಅಂದಿನ ಮೈಸೂರು ಸರಕಾರ ದಲ್ಲಿ ದಿವಾನರಾಗಿದ್ದ ಮಹಮದ್ ಇಸ್ಮಾಯಿಲ್ ಲೋಕಾ ರ್ಪಣೆಗೊಳಿಸಿದ್ದರು. ಸುಮಾರು 13,000 ರೂ. ವೆಚ್ಚದಲ್ಲಿ ಸೇತುವೆಯನ್ನು ನಿರ್ಮಿಸಲಾಗಿತ್ತು. ಹಳೆಯದಾದ ಕಟೀಲು ಸೇತುವೆಯ ಬದಿಯ ಕಲ್ಲುಗಳು ಬೀಳುವ ಸ್ಥಿತಿಯಲ್ಲಿದ್ದು ಪೆಟ್ರೋಲ್ ಬಂಕ್ ಬಳಿಯ ಕಿರು ಮೋರಿಗೆ ಕಾರ್ಯಕಲ್ಪ ವಾಗಬೇಕಾಗಿದೆ.
ಹಳೆಯದಾಗಿರುವ ಕಟೀಲು ಸೇತುವೆಯ ಧಾರುಣ ಸಾಮರ್ಥ್ಯವನ್ನು ಹೆದ್ದಾರಿ ಇಲಾಖೆ ಯವರು ಪರೀಕ್ಷಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
ಕಟೀಲು ಸೇತುವೆ ಬಗ್ಗೆ ಇಲಾಖೆಯ ಮೂಲಕವಾಗಿ ಧಾರಣ ಸಾಮರ್ಥ್ಯ ಹಾಗೂ ಅದರ ಗಟ್ಟಿಮುಟ್ಟಿದ ಬಗ್ಗೆ ಪರಿಶೀಲನೆ ಆಗಬೇಕಾಗಿದೆ. ಕಟೀಲು ಬೈಪಾಸ್ ರಸ್ತೆಯ ಬಗ್ಗೆ ಪ್ರಸ್ತಾವನೆಯಿದ್ದು, ಇಲಾಖೆಯು ಚಿಂತನೆ ನಡೆಸಿದೆ. ಜನ ದಟ್ಟಣೆ ಕಡಿಮೆ ಮಾಡಲು ಹೆದ್ದಾರಿ ವಿಸ್ತರಿಸುವ, ಬೈಪಾಸ್ ರಸ್ತೆ ನಿರ್ಮಿಸುವುದು ಅತೀ ಅಗತ್ಯ. ಈ ಬಗ್ಗೆ ಇಲಾಖೆ ಹಾಗೂ ಸರಕಾರದ ಗಮನ ಸೆಳೆಯಲಾಗುವುದು ಎಂದು ಮುಲ್ಕಿ-ಮೂಡಬಿದ್ರೆ ಕ್ಷೇತ್ರದ ಶಾಸಕ ಉಮಾನಾಥ ಕೋಟ್ಯಾನ್ ಪಬ್ಲಿಕ್ ನೆಕ್ಸ್ಟ್ ಗೆ ತಿಳಿಸಿದ್ದಾರೆ.
Kshetra Samachara
26/08/2021 01:56 pm