ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಒಡೆಯರ ಬೆಟ್ಟು ಬಳಿ ತಾಜ್ಯದಿಂದ ದುರ್ವಾಸನೆ

ಮುಲ್ಕಿ: ಮುಲ್ಕಿ ನಗರ ಪಂಚಾಯತ್ ವ್ಯಾಪ್ತಿಯ ಬಸ್ಸು ನಿಲ್ದಾಣದ ಹಿಂಬದಿಯ ಕೊಳಚಿಕಂಬಳ ರಸ್ತೆಯ ಒಡೇರಬೆಟ್ಟು ದುರ್ಗಾ ರೆಸಿಡೆನ್ಸಿ ಎದುರುಗಡೆ ಇರುವ ಖಾಸಗಿ ಜಾಗದಲ್ಲಿ ಸಾರ್ವಜನಿಕರು ಎಗ್ಗಿಲ್ಲದೆ ತ್ಯಾಜ್ಯ ತಂದು ಬಿಸಾಡುತ್ತಿದ್ದಾರೆ ಎಂದು ಸ್ಥಳೀಯರಾದ ಗೋಪಿನಾಥ ಸಾಲ್ಯಾನ್ ಆರೋಪಿಸಿದ್ದಾರೆ.

ಅವರು ಪಬ್ಲಿಕ್ ನೆಕ್ಸ್ಟ್ ಜೊತೆ ಮಾತನಾಡಿ ಸಾರ್ವಜನಿಕರು ತ್ಯಾಜ್ಯ ತಂದು ಬಿಸಾಡುವ ಜಾಗದಲ್ಲಿ ಬಾವಿ ಕೂಡ ಇದ್ದು ನೀರು ಮಲಿನವಾಗುತ್ತಿದೆ. ಇದೇ ಜಾಗದಲ್ಲಿ ಬೆಕ್ಕು ಹಾಗೂ ನಾಯಿಗಳ ಸಣ್ಣಸಣ್ಣ ಮರಿಗಳನ್ನು ಕೆಲವರು ತಂದು ಬಿಡುತ್ತಿದ್ದು ಮರುಕ ಹುಟ್ಟಿಸುತ್ತದೆ.

ಕೊಳಚಿಕಂಬಳ ಕಡೆಯಿಂದ ಅಯ್ಯಪ್ಪಸ್ವಾಮಿ ಗುಡಿಗೆ, ನಾಗಬ್ರಹ್ಮ ಸ್ಥಾನಕ್ಕೆ ಹಾಗೂ ಮುಲ್ಕಿ ಕಡೆಗೆ ಇದೇ ಖಾಸಗಿ ಜಾಗದ ಬದಿಯಿಂದ ಕಾಲು ದಾರಿ ಸಮೀಪವಾಗಿದ್ದು ತ್ಯಾಜ್ಯ ಎಸೆಯುವ ಬಗ್ಗೆ ಅನೇಕ ಬಾರಿ ಮುಲ್ಕಿ ನಗರ ಪಂಚಾಯತ್ ದೂರು ನೀಡಿದ್ದರೂ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಗೋಪಿನಾಥ ಸಾಲ್ಯಾನ್ ದೂರಿದ್ದಾರೆ. ಕೂಡಲೇ ಮುಲ್ಕಿ ನಗರ ಪಂಚಾಯತ್ ಮುಖ್ಯಾಧಿಕಾರಿಗಳು ತ್ಯಾಜ್ಯವನ್ನು ತೆರವುಗೊಳಿಸಿದ ಜೊತೆಗೆ ರಾಜ್ಯ ಬಿಸಾಡುವ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದ್ದಾರೆ

Edited By : Manjunath H D
Kshetra Samachara

Kshetra Samachara

18/08/2021 02:22 pm

Cinque Terre

9.36 K

Cinque Terre

0

ಸಂಬಂಧಿತ ಸುದ್ದಿ