ಉಡುಪಿ: ಉಡುಪಿ ಜಿಲ್ಲೆಯ ಪರ್ಕಳದಿಂದ ಮುಂದಕ್ಕೆ ಸಾಗಿ, ಬಡಗುಬೆಟ್ಟು ಪಂಚಾಯಿತಿ ಹತ್ತಿರ ಮೆಸ್ಕಾಂನ ವಿದ್ಯುತ್ ಪ್ರಸರಣ ಉಪಕೇಂದ್ರದ ಹಿಂಬದಿಯಲ್ಲಿ ಅತಿ ಪುರಾತನ ದೇವಾಲಯದ ಕುರುಹು ಪತ್ತೆಯಾಗಿದೆ.
ಈ ದೇವಾಲಯದ ಬಳಿಯಿರುವ ಬಾವಿಯಲ್ಲಿ ಅಂದಾಜು ನಾಲ್ಕು ಫೀಟ್ ಎತ್ತರವಿರುವ ಸುಂದರವಾದ ಕೆತ್ತನೆಯ ಶ್ರೀ ವಿಷ್ಣುಮೂರ್ತಿ ದೇವರ ಮೂರ್ತಿ ಕಾಣ ಸಿಕ್ಕಿದೆ.
ಶಿರ್ವ ಸುಂದರಂ ಶೆಟ್ಟಿ ಕಾಲೇಜಿನ ಪುರಾತತ್ವ ವಿಭಾಗದ ಪ್ರೊಫೆಸರ್ ಟಿ. ಮುರುಗೇಶ್ ಅವರು ಹಾಗೂ ಅವರ ವಿದ್ಯಾರ್ಥಿಗಳ ತಂಡ ಈ ಅಮೂಲ್ಯ ಮೂರ್ತಿಯನ್ನು ಪತ್ತೆ ಹಚ್ಚಿದ್ದಾರೆ.
Kshetra Samachara
05/02/2021 02:00 pm