ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ನಮಗೆ ಚಪ್ಪಾಳೆ, ಶುಭ ಕೋರುವ ಅಗತ್ಯವಿಲ್ಲ, ಸಮಾನ ವೇತನ ಜಾರಿಗೊಳಿಸಿ; ಆರೋಗ್ಯ ಇಲಾಖೆ ಗುತ್ತಿಗೆ ನೌಕರರ ಆಕ್ರೋಶ

ಉಡುಪಿ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಗುತ್ತಿಗೆ ಮತ್ತು ಹೊರಗುತ್ತಿಗೆ ಆಧಾರಿತ ನೌಕರರು ಎರಡನೇ ದಿನ ಬೀದಿಗಿಳಿದು ಹೋರಾಟ ಮುಂದುವರಿಸಿದ್ದಾರೆ.

ವೇತನ ಹೆಚ್ಚಳ, ಭತ್ಯೆ ನೀಡುವಂತೆ ಒತ್ತಾಯಿಸಿ ಹುತಾತ್ಮ ಸ್ಮಾರಕದೆದುರು ಪ್ರತಿಭಟನೆ ನಡೆಸಿದ್ದಾರೆ.

ಈ ಮೂಲಕ ಪ್ರತಿಭಟನೆ ಎಂಟನೇ ದಿನಕ್ಕೆ ಕಾಲಿಟ್ಟಿದೆ. ನಿನ್ನೆ ಡಿಎಚ್ಒ ಕಚೇರಿ ಆವರಣದಲ್ಲಿ ಬೃಹತ್ ಸಂಖ್ಯೆಯಲ್ಲಿ ಜಮಾಯಿಸಿ ಪ್ರತಿಭಟಿಸಿದ್ದರು. ಇಂದು ಪ್ರತಿಭಟನೆ ಅಜ್ಜರಕಾಡಿಗೆ ಶಿಫ್ಟ್ ಆಗಿದೆ. ರಾಜ್ಯ ಸರ್ಕಾರ ಮತ್ತು ಆರೋಗ್ಯ ಇಲಾಖೆಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ಸಿಬ್ಬಂದಿ ಧಿಕ್ಕಾರ ಕೂಗಿದರು. ಇಂದು ನಾವು ಎರಡನೇ ಹಂತದ ಪ್ರತಿಭಟನೆ ನಡೆಸುತ್ತಿದ್ದೇವೆ. ಸರಕಾರ ಬೇಡಿಕೆ ಈಡೇರಿಸದಿದ್ದರೆ ಉಗ್ರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು. ನಮಗೆ ಚಪ್ಪಾಳೆ, ಶುಭ ಕೋರುವ ಅಗತ್ಯ ಇಲ್ಲ. ಮೊದಲು ಸಮಾನ ವೇತನ ಜಾರಿಗೊಳಿಸಿ ಅಷ್ಟೇ ಎಂದು ಒತ್ತಾಯಿಸಿದರು.

ಸೋಮವಾರ ಉಡುಪಿಯಿಂದ ಮಣಿಪಾಲ ಜಿಲ್ಲಾಧಿಕಾರಿ ಚಲೋ ಕಾರ್ಯಕ್ರಮ ಆಯೋಜಿಸುವುದಾಗಿ ಸಂಘಟನೆ ಮುಖಂಡರು ಹೇಳಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

03/10/2020 12:20 pm

Cinque Terre

17 K

Cinque Terre

1