ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಬಂದ್ ಗೆ ಕೃಷ್ಣನಗರಿಯಲ್ಲಿ ನೀರಸ ಪ್ರತಿಕ್ರಿಯೆ; ಅಂಗಡಿ, ಹೋಟೆಲ್ ಓಪನ್, ಜನಜೀವನ ಎಂದಿನಂತೆ

ಉಡುಪಿ: ಭೂ ಸುಧಾರಣೆ ಹಾಗೂ ಎ.ಪಿ.ಎಂ. ಸಿ. ಕಾಯ್ದೆ ತಿದ್ದುಪಡಿ ವಿರೋಧಿಸಿ ರೈತಪರ ಸಂಘಟನೆಗಳು ಮತ್ತು

ಕನ್ನಡ ಪರ ಸಂಘಟನೆಗಳ ಒಕ್ಕೂಟ ಇಂದು ಕರೆ ನೀಡಿದ್ದ ‘ಕರ್ನಾಟಕ ಬಂದ್’ಗೆ ಉಡುಪಿ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಕೃಷ್ಣನಗರಿಯಲ್ಲಿ ಜನಜೀವನ ಎಂದಿನಂತಿದ್ದು, ಬೆಳಿಗ್ಗೆಯಿಂದಲೇ ಆಟೊ, ಬಸ್‌, ಖಾಸಗಿ ವಾಹನಗಳ ಸಂಚಾರ ಸುಗಮವಾಗಿತ್ತು. ಉಡುಪಿ ಜೆಡಿಎಸ್ ಕಾರ್ಯಕರ್ತರು ಬಂದ್ ಗೆ ಮನವೊಲಿಸುವ ಪ್ರಯತ್ನ ನಡೆಸಿದರಾದರೂ ಜನರಿಂದ ಯಾವುದೇ ಪೂರಕ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ನಗರದ ಅಲ್ಲಲ್ಲಿ ತರಕಾರಿ ವ್ಯಾಪಾರ, ಅಂಗಡಿ, ಶಾಪಿಂಗ್ ಮಾಲ್‌ಗಳಲ್ಲಿ ಎಂದಿನಂತೆ ವ್ಯಾಪಾರ ವಹಿವಾಟು ನಡೆಯುತ್ತಿವೆ. ಸರ್ಕಾರಿ ಕಚೇರಿಗಳು,ಮಳಿಗೆಗಳು, ಅಂಗಡಿ ಮುಂಗಟ್ಟು ಹೋಟೆಲ್ ಮಾಮೂಲಿನಂತೆ ತೆರೆದಿವೆ.

ಬೆಳಿಗ್ಗೆ ಸಣ್ಣ ಮಟ್ಟದ ಪ್ರತಿಭಟನೆ ,ರಸ್ತೆ ತಡೆ ನಡೆಯಿತಾದರೂ ಪೊಲೀಸರ ಮಧ್ಯಪ್ರವೇಶದಿಂದ ಪರಿಸ್ಥಿತಿ ತಿಳಿಯಾಗಿತ್ತು.

Edited By : Nagesh Gaonkar
Kshetra Samachara

Kshetra Samachara

28/09/2020 12:09 pm

Cinque Terre

23.74 K

Cinque Terre

1