ಕೇದಾರೋತ್ಥಾನ ಟ್ರಸ್ಟ್ ಮತ್ತು ಕೇದಾರೋತ್ಥಾನ ರೈತ ಉತ್ಪಾದಕರ ಕಂಪನಿ ಮೂಲಕ ಹಡಿಲು ಭೂಮಿ ಕೃಷಿಯ ಕಡೆ ನಟ್ಟಿ "ಗೌಜು ಗಮ್ಜಲ್-2022" ನೀಲಾವರ ಸೇತುವೆ ಬಳಿ ಜರುಗಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಉಡುಪಿ ಶಾಸಕ ಕೆ.ರಘುಪತಿ ಭಟ್ ಮಾತನಾಡಿ, ಹಡಿಲು ಭೂಮಿಯಲ್ಲಿ ಬೆಳೆ ತೆಗೆದರೆ ಹಳೆ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡಿದಷ್ಟು ಪುಣ್ಯ ಬರುವುದು. ಲಾಭ- ನಷ್ಟದ ಲೆಕ್ಕಾಚಾರ ಮಾಡದೆ ಉಡುಪಿ ವಿಧಾನಸಭಾ ಕ್ಷೇತ್ರದಿಂದ ದೇಶಕ್ಕೆ ಆಹಾರ ಪೂರೈಕೆ ಮಾಡಿದ ಹೆಮ್ಮೆ ಇದೆ ಎಂದರು.
ಬಳಿಕ ಕೆಸರು ಗದ್ದೆಯಲ್ಲಿ ಆಯೋಜಿಸಲಾದ ವಿವಿಧ ಕ್ರೀಡೆಗಳಿಗೆ ಗದ್ದೆಗೆ ಪಂಚಾಮೃತವನ್ನು ಅರ್ಪಿಸಿ ಚಾಲನೆ ನೀಡಿ ಶಾಸಕರೂ ಸ್ಪರ್ಧೆಯಲ್ಲಿ ಭಾಗವಹಿಸಿದರು.
ನೀಲಾವರ ಗ್ರಾಮ ಪಂಚಾಯತ್ ಅಧ್ಯಕ್ಷ ಮಹೇಂದ್ರ ಕುಮಾರ್, ಗೌಜು ಗಮ್ಜಲ್ ಸಂಘಟಕ ಪ್ರತಾಪ್ ಹೆಗ್ಡೆ ಮಾರಾಳಿ, ನೀಲಾವರ ಶ್ರೀ ಮಹಿಷಮರ್ದಿನಿ ದೇವಸ್ಥಾನ ಆಡಳಿತ ಮೊಕ್ತೇಸರ ರಘುರಾಮ್ ಮಧ್ಯಸ್ಥ, ಕೇದಾರೋತ್ಥಾನ ಟ್ರಸ್ಟ್ ಸದಸ್ಯರಾದ ಬಿರ್ತಿ ರಾಜೇಶ್ ಶೆಟ್ಟಿ, ಇನ್ನಿತರು ಉಪಸ್ಥಿತರಿದ್ದರು. ಕೆಸರು ಗದ್ದೆಯಲ್ಲಿ ನಾನಾ ಆಟೋಟ ಸ್ಪರ್ಧೆಗಳು ಜರುಗಿತು.
Kshetra Samachara
23/08/2022 07:31 pm