ಮಂಗಳೂರು: ದೇಶಾದ್ಯಂತ, ರಾಜ್ಯಾದ್ಯಂತ ಮಹಿಳೆಯರ ಮೇಲಾಗುತ್ತಿರುವ ದೌರ್ಜನ್ಯದ ವಿರುದ್ಧ ದನಿಯೆತ್ತಲು ಸಿಎಫ್ಐ ಗರ್ಲ್ಸ್ ಕಾನ್ಫರೆನ್ಸ್ ನಡೆಸಲಾಗುತ್ತದೆ ಎಂದು ಸಿಎಫ್ಐ ಕಾರ್ಯಕರ್ತೆ ಫಾತಿಮಾ ಹೇಳಿದರು.
ಬರೀ ಒಂದು ತುಂಡು ಬಟ್ಟೆಯ ವಿಚಾರದಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರ ಶಿಕ್ಷಣವನ್ನು ಕಸಿದುಕೊಳ್ಳಲಾಗುತ್ತಿದೆ. ಅಲ್ಲದೆ ಮುಸ್ಲಿಂ ವಿದ್ಯಾರ್ಥಿನಿಯರನ್ನು ಟಾರ್ಗೆಟ್ ಮಾಡಲಾಗುತ್ತದೆ. ಎಲ್ಲಾ ರೀತಿಯಲ್ಲಿ ಮುಸ್ಲಿಂ ಮಹಿಳೆಯರು, ಮಹಿಳಾ ಕೂಟವನ್ನು ಹತ್ತಿಕ್ಕುವ ಪ್ರಯತ್ನ ಆಗುತ್ತಿದೆ. ಈ ಎಲ್ಲಾ ಪ್ರಯತ್ನವನ್ನು ಖಂಡಿಸಿ ಸಿಎಫ್ ಐ ಗರ್ಲ್ಸ್ ಕಾನ್ಫರೆನ್ಸ್ ನಡೆಸಲಾಗುತ್ತದೆ ಎಂದು ಹೇಳಿದರು.
ಅನುಮತಿಯಿಲ್ಲದೆ ಮೆರವಣಿಗೆ ಮಾಡಿರುವ ಬಗ್ಗೆ ಮಾತನಾಡಿದ ಅವರು, ನಾವು ಹಂಪನಕಟ್ಟೆಯಿಂದ ಇಂದು ಮೆರವಣಿಗೆ ಮಾಡುವ ಬಗ್ಗೆ ಯೋಜನೆ ಹಾಕಿದ್ದೆವು. ಆದರೆ ಪೊಲೀಸರು ಅನುಮತಿ ನೀಡದ ಕಾರಣ ಮೆರವಣಿಗೆಯನ್ನು ಮೊಟಕುಗೊಳಿಸಲಾಗಿದೆ ಎಂದು ಫಾತಿಮಾ ಹೇಳಿದರು.
PublicNext
16/07/2022 02:32 pm