ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಪು : ದಿನದಿಂದ ದಿನಕ್ಕೆ ಕಾವೇರುತ್ತಿದೆ ಕಂಚಿನಡ್ಕ ಮಿಂಚಿನ ಬಾವಿ ಕೇಸ್

ಕಾಪು : ಕಂಚಿನಡ್ಕ ಮಿಂಚಿನ ಬಾವಿ ಶ್ರೀ ಬಬ್ಬುಸ್ವಾಮಿ ಕ್ಷೇತ್ರಕ್ಕೆ ಮೇಲ್ಛಾವಣಿ ನಿರ್ಮಾಣಕ್ಕೆ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಹಿಂದೂ ಸಂಘಟನೆಯ ಪ್ರಮುಖರು ಸಭೆ ನಡೆಸಿ ಬಳಿಕ ಕ್ಷೇತ್ರಕ್ಕೆ ತೆರಳಿ ಪ್ರಾರ್ಥನೆ ನಡೆಸಿ ದೈವದಲ್ಲಿ ದೂರಿದ್ದಾರೆ.

ಪಡುಬಿದ್ರಿ ಠಾಣೆಯಲ್ಲಿ ನಡೆದ ಸೌಹಾರ್ದ ಸಭೆ ವಿಫಲವಾದ ಹಿನ್ನಲೆಯಲ್ಲಿ , ಮಿಂಚಿನಬಾವಿ ಕ್ಷೇತ್ರದ ಆಡಳಿತ ಮಂಡಳಿ ಸ್ಥಳೀಯ ಪ್ರಸನ್ನ ಪಾರ್ವತಿ ದೇವಳದ ಸಭಾಂಗಣದಲ್ಲಿ ಎಲ್ಲಾ ಹಿಂದೂ ಸಂಘಟನೆಗಳ ಸಭೆ ಕರೆದಿದ್ದರು. ನೂರಾರು ಮುಖಂಡರು ಹಾಗೂ ಕಾರ್ಯಕರ್ತರು ಸಭೆಯಲ್ಲಿ ಭಾಗವಹಿಸಿದ್ದರು.

ಇನ್ನು ಸಭೆಯಲ್ಲಿ ಮಾತನಾಡಿದ ಹಿಂದೂ ಸಂಘಟನೆಗಳ ಮುಖಂಡರು ಶ್ರೀ ಕ್ಷೇತ್ರದ ಆಢಳಿತ ಮಂಡಳಿ ಮೇಲ್ಛಾವಣಿ ನಿರ್ಮಿಸಲು ಹಾಗೂ ಅಕ್ರಮಗಳ ತೆರವಿಗೆ ಮಾಡುವ ಕಾರ್ಯಚರಣೆಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ. ಬಳಿಕ ಶ್ರೀ ಕ್ಷೇತ್ರಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದ್ದಾರೆ.

ಈ ಸಂದರ್ಭದಲ್ಲಿ ಪ್ರಮುಖರಾದ ಲೋಕೇಶ್ ಕಂಚಿನಡ್ಕ, ದಿನೇಶ್ ಕಂಚಿನಡ್ಕ, ಸದಾಶಿವ ಕಂಚಿನಡ್ಕ, ಮಹೇಶ್ ಬೈಲೂರು, ಗುರುಪ್ರಸಾದ್ ಸೂಡಾ, ಉಚ್ಚಿಲ ರಾಜೇಶ್, ಪ್ರತೀಕ್ ಕೋಟ್ಯಾನ್, ರಾಜೇಶ್ ಕೋಟ್ಯಾನ್, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಮಿಥುನ್ ಹೆಗ್ಡೆ,ಜಯಪ್ರಕಾಶ್, ಶ್ರೀ ಕಾಂತ್ ಶೆಟ್ಟಿ, ವಿಷ್ಣು ಮೂರ್ತಿ ಭಟ್ , ಸುಹಾಸ್ ಶೆಟ್ಟಿ ಮುಂತಾದವರಿದ್ದರು.

Edited By :
Kshetra Samachara

Kshetra Samachara

30/05/2022 06:19 pm

Cinque Terre

4.18 K

Cinque Terre

0