ಮಂಗಳೂರು: ನಗರದ ರಾಮಕೃಷ್ಣ ಮಠವು 75 ವರ್ಷದ ಸಂಭ್ರಮಾಚರಣೆಯಲ್ಲಿದ್ದು, ಜೂನ್ 3, 4ರಂದು ನಡೆಯುವ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಸಿಎಂ ಬಸವರಾಜ್ ಬೊಮ್ಮಾಯಿ ಉದ್ಘಾಟಿಸಲಿದ್ದಾರೆ.
ರಾಮಕೃಷ್ಣ ಮಠದ ನೂತನ ಮಹಾದ್ವಾರವನ್ನು ಪಶ್ಚಿಮ ಬಂಗಾಳ ರಾಮಕೃಷ್ಣ ಮಠ ಬೇಲೂರು ಮಠದ ಉಪಾಧ್ಯಕ್ಷ ಪರಮ ಪೂಜ್ಯ ಶ್ರೀಮತ್ ಸ್ವಾಮಿ ಗೌತಮಾನಂದಜಿ ಮಹಾರಾಜ್ ಲೋಕಾರ್ಪಣೆ ಮಾಡಲಿದ್ದಾರೆ. ಅಮೃತ ಸದನ- ಸ್ವಾಮಿ ವೀರೇಶ್ವರಾನಂದ ಸಾಧು ನಿವಾಸವನ್ನು ಅವರೇ ಉದ್ಘಾಟನೆ ಮಾಡಲಿದ್ದಾರೆ. ಅಮೃತ ಭವನ- ಸ್ವಾಮಿ ವಿವೇಕಾನಂದ ತರಬೇತಿ ಕೇಂದ್ರದ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಲಿದೆ.
ಅಮೃತ ಮಹೋತ್ಸವದ ಹಾಗೂ 'ಅಮೃತ ಸಂಗಮ' ಎಂಬ ಎರಡು ದಿನಗಳ ರಾಜ್ಯಮಟ್ಟದ ಸಾಧು ಭಕ್ತ ಸಮ್ಮೇಳನ ಉದ್ಘಾಟನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ದೇಶದ 75 ಸ್ವಾಮೀಜಿಗಳನ್ನು ಗೌರವಿಸಲಾಗುತ್ತದೆ. ಅಲ್ಲದೆ 18 ಮಂದಿ ಸಂಪನ್ಮೂಲ ವ್ಯಕ್ತಿಗಳು ಸರಳತೆಯ ಬಗ್ಗೆ ವಿದ್ವಾಂಸರು ಸರಳತೆಯ ಪರಿಕಲ್ಪನೆಯಲ್ಲಿ ತಮ್ಮ ವಿಚಾರಗಳನ್ನು ಮಂಡಿಸಲಿದ್ದಾರೆ.
Kshetra Samachara
30/05/2022 03:57 pm