ಸುಬ್ರಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಕೆಲಸದಿಂದ ತೆಗೆದು ಹಾಕಿದ ಮಲೇಕುಡಿಯ ವಂಶಸ್ಥರನ್ನು NRM ನೆಲೆಯಲ್ಲಿ ಮರು ನೇಮಕ ಮಾಡಲಾಗುವುದು.ದೇವಳದ ಆಸ್ತಿ,ಕಟ್ಟಡಗಳ ನವೀಕರಣಕ್ಕಾಗಿ ಕಟ್ಟಡಗಳಿಗೆ ಪ್ರತೀ ಮೂರು ವರ್ಷಕೊಮ್ಮೆ ಸುಣ್ಣ, ಬಣ್ಣ ಬಲಿದು ವ್ಯವಸ್ಥೆ ಕಲ್ಪಿಸಲಾಗುವುದು. ದೇವಸ್ಥಾನಕ್ಕೆ ಆದಾಯ ಬರುವ ಸಲುವಾಗಿ ಪಿಪಿಪಿ ಮೋಡೆಲ್ ಅಡಿಯಲ್ಲಿ ಯೋಜನೆ ರೂಪಿಸಲು ಚಿಂತನೆ ನಡೆಸಲಾಗಿದೆ.ಕಲುಷಿತ ನೀರು ನದಿಗೆ ಸೇರದಂತೆ ವ್ಯವಸ್ಥೆ ಮಾಡಲು ಕರ್ನಾಟಕ ಅರ್ಬನ್ ವಾಟರ್ ಸಪ್ಲ್ಯೆ ವ್ಯವಸ್ಥೆ ಹಾಗೂ ಕುಕ್ಕೆಯಲ್ಲಿ ಸುಸಜ್ಜಿತ ಪಾರ್ಕಿಂಗ್ ಮತ್ತು ಗೋಶಾಲೆ ನಿರ್ಮಾಣಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ. ವಿ ಅವರು ಹೇಳಿದರು.
ದೇವಸ್ಥಾನದ ಮಾಸ್ಟರ್ ಪ್ಲಾನರಿ ಪ್ರಗತಿ ಪರಿಶೀಲನಾ ಸಭೆಯ ನಂತರ ಮಾದ್ಯಮದವರೊಂದಿಗೆ ಮಾತನಾಡಿದ ದ.ಕ.ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ.ಅವರು, ದೇವಸ್ಥಾನದಲ್ಲಿ ಜಿಲ್ಲಾಡಳಿತ ವತಿಯಿಂದ ನಿರ್ಮಾಣವಾಗಲಿರುವ ಅತೀ ವಿಶಾಲವಾದ ಗೋಶಾಲೆ ನಿರ್ಮಾಣದ ಬಗ್ಗೆ ಈಗಾಗಲೇ ಯೋಜನೆ ರೂಪಿಸಲಾಗಿದೆ. ಅರಣ್ಯ ಇಲಾಖೆಯ ಸಹಯೋಗದಲ್ಲಿ ಜಾಗಗಳ ಸ್ಥಳ ತನಿಖೆ ಮಾಡಲಾಗಿದೆ. ದೇಶದಲ್ಲೇ ಅತೀ ಉತ್ತಮ ರೀತಿಯ ಗೋಶಾಲೆ ಕುಕ್ಕೆಯಲ್ಲಿ ನಿರ್ಮಾಣವಾಗಲಿದೆ ಎಂದು ಅವರು ಹೇಳಿದರು. ಕುಕ್ಕೆ ಸುಬ್ರಹ್ಮಣ್ಯ ಪೇಟೆಯಲ್ಲಿ ಅತೀ ಹೆಚ್ಚು ಪಾರ್ಕಿಂಗ್ ಸಮಸ್ಯೆ ಕಂಡುಬರುತ್ತಿದ್ದು, ಈ ಬಗ್ಗೆ ವಾಹನ ನಿಲುಗಡೆಗೆ ಪೂರಕ ಸ್ಥಳಗಳನ್ನು ಗುರುತಿಸಿ ಪಾರ್ಕಿಂಗ್ ವ್ಯವಸ್ಥೆಗೆ ಯೋಜನೆ ರೂಪಿಸಲು ತೀರ್ಮಾನಿಸಲಾಗಿದೆ.
ದೇವಾಲಯಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿರುವ ಪ್ರಕರಣಗಳನ್ನು ಅತೀ ಶೀಘ್ರವಾಗಿ ವಿಲೇವಾರಿ ಮಾಡಲು ಹಿರಿಯ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.ಕುಕ್ಕೆಯಲ್ಲಿನ ಕಲುಷಿತ ನೀರು ನದಿಗೆ ಸೇರದಂತೆ ವ್ಯವಸ್ಥೆ ಮಾಡಲು ಕರ್ನಾಟಕ ಅರ್ಬನ್ ವಾಟರ್ ಸಪ್ಲ್ಯೆಮಾದರಿಯಲ್ಲಿ ಯೋಜನೆ ರೂಪಿಸಲಾಗಿದೆ.ಇಲ್ಲಿನ ಆಶ್ಲೇಷ ಬಲಿ ಸೇರಿದಂತೆ ಇತರೆ ಸೇವೆಗಳ ತಾತ್ಕಲಿಕ ಹಾಗೂ ಖಾಯಂ ನಿರ್ವಹಣೆ ಬಗ್ಗೆ ಹಾಗೂ ಭಕ್ತರಿಗೆ ಪೂರಕ ವ್ಯವಸ್ಥೆ ಬಗ್ಗೆ ಹಾಗೂ ಕತೃಗಳಿಗೆ ನೆಲೆ ನಿಲ್ಲಲು ಎಲ್ಲೆಲ್ಲಿ ಜಾಗ ಮತ್ತು ಅವರ ಸೇವಾ ಭತ್ಯೆಯನ್ನು ಹೆಚ್ಚಿಸಲು ಹಾಗೂ ಕೆಲವೊಂದು ಸೇವೆಗಳನ್ನು ಹೆಚ್ಚುವರಿ ನಿರ್ಧಾರ ಕೈಗೊಳ್ಳಲಾಗಿದೆ. ಅರಣ್ಯ ಇಲಾಖೆಯೊಂದಿಗೆ ಚರ್ಚಿಸಿ ಅನಿವಾರ್ಯ ಜಾಗ ಅಗತ್ಯತೆ ಬಗ್ಗೆ ಪರಿಶೀಲನೆ ಮಾಡಲಾಗಿದೆ. ಈಗಾಗಲೇ ಕುಕ್ಕೆಯಲ್ಲಿ ಕೆಲಸ ಮಾಡುತ್ತಿದ್ದ ಮಲೆಕುಡಿಯರನ್ನು ಕೆಲಸದಿಂದ ತೆಗೆದು ಹಾಕಿದ ವಿಚಾರಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಸಿ ಕೂಡಲೇ ಅವರನ್ನು ಎನ್ಆರ್ಎಂ ನೆಲೆಯಲ್ಲಿ ಅವರನ್ನು ಮರು ನೇಮಕ ಮಾಡಿ,ಕೆಲಸದಲ್ಲಿ ಮುಂದಿವರಿಸಲು ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಸುಳ್ಯ ಶಾಸಕರು ಹಾಗೂ ಸಚಿವ ಎಸ್.ಅಂಗಾರ ಅವರು ಮಾತನಾಡಿ, ದೇವಸ್ಥಾನ ವತಿಯಿಂದ ನಡೆಯುವ ಮಾಸ್ಟರ್ ಪ್ಲಾನ್ ಕಾಮಗಾರಿಗಳ ಪ್ರಗತಿ ಬಗ್ಗೆ ಮಾಹಿತಿ ಪಡೆಯಲಾಗಿದೆ. ಮುಖ್ಯಮಂತ್ರಿಗಳು ಕುಕ್ಕೆಗೆ ಆಗಮಿಸುವ ಹಿನ್ನಲೆಯಲ್ಲಿ ಮಾನ್ಯ
ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಮಾಸ್ಟರ್ ಪ್ಲಾನ್ ಕಾಮಗಾರಿಗಳು ಬೇಗನೆ ಆರಂಭಿಸುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್ರಾಂ ಸುಳ್ಳಿ,ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಡಾ.ನಿಂಗಯ್ಯ, ಸೇರಿದಂತೆ ಅರಣ್ಯ, ಕಂದಾಯ ಇಲಾಖೆಗಳ ಪ್ರಮುಖ ಅಧಿಕಾರಿಗಳು ಸಭೆಯಲ್ಲಿ ವಿವಿಧ ವಿಚಾರಗಳ ಬಗ್ಗೆ ಚರ್ಚೆ ನಡೆಸಿದರು.
Kshetra Samachara
27/05/2022 01:25 pm