ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪುತ್ತೂರು: ಉತ್ತರಕನ್ನಡ ಮೀನುಗಾರರಿಗೆ ಪರಿಶಿಷ್ಟ ಜಾತಿ ಪ್ರಮಾಣಪತ್ರ: ಸಿಟ್ಟಿಗೆದ್ದ ದಲಿತ ಸಂಘಟನೆ

ಪುತ್ತೂರು: ಉತ್ತರಕನ್ನಡದ ಮೀನುಗಾರರಿಗೆ ಪರಿಶಿಷ್ಟ ಜಾತಿ ಪ್ರಮಾಣಪತ್ರ ‌ನೀಡುವುದನ್ನು ವಿರೋಧಿಸಿ ವಿವಿಧ ದಲಿತ ಸಂಘಟನೆಗಳು ಪುತ್ತೂರಿನ ಮಿನಿ ವಿಧಾ‌ನಸೌಧದ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದವು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ದಲಿತ ಮುಖಂಡ ಡಾ. ರಘು 1976 ರಿಂದ ಸರ್ಕಾರ ಉತ್ತರಕನ್ನಡದ ಮೀನುಗಾರರಿಗೆ ಪರಿಶಿಷ್ಟ ಜಾತಿ ಪ್ರಮಾಣಪತ್ರವನ್ನು ನೀಡಲಾಗುತ್ತಿದ್ದು, ಮೊಗವೀರ ಎಂದು ಕರೆಯಲ್ಪಡುವ ಈ ಸಮುದಾಯ ಪ್ರವರ್ಗ A ಕ್ಯಾಟಗರಿಯಲ್ಲಿ ಬರುತ್ತಿದ್ದು, ಇದೀಗ ಕಾನೂನುಬಾಹಿರವಾಗಿ ಈ ಸಮುದಾಯಕ್ಕೆ ಪರಿಶಿಷ್ಟ ಜಾತಿ ಪ್ರಮಾಣಪತ್ರವನ್ನು ನೀಡಲಾಗುತ್ತಿದೆ.

ದಲಿತ ಸಂಘಟನೆಗಳ ಪ್ರತಿಭಟನೆಯ ಬಳಿಕ ಕಳೆದ ಹತ್ತು ವರ್ಷಗಳಿಂದ ಈ ಪ್ರಮಾಣಪತ್ರವನ್ನು ನೀಡುವುದನ್ನು ಸರ್ಕಾರ ನಿಲ್ಲಿಸಿದ್ದು, ಇದನ್ನು ವಿರೋಧಿಸಿ ಮೀನುಗಾರ ಸಂಘಟನೆಗಳು ಪ್ರತಿಭಟನೆ ಆರಂಭಿಸಿದ್ದಾರೆ. ಸರ್ಕಾರ ಈ ಪ್ರತಿಭಟನೆಗೆ ಮಣಿಯದೆ ದಲಿತರಿಗೆ ಆಗುತ್ತಿರುವ ಈ ಅನ್ಯಾಯವನ್ನು ತಡೆಯಬೇಕೆಂದರು. ಪ್ರತಿಭಟನೆಯ ಬಳಿಕ ಪುತ್ತೂರು ತಹಶೀಲ್ದಾರ್ ರಮೇಶ್ ಬಾಬು ಮೂಲಕ ರಾಜ್ಯಪಾಲ, ಮುಖ್ಯಮಂತ್ರಿ ಮತ್ತು ಸಮಾಜ ಕಲ್ಯಾಣ ಮಂತ್ರಿಗೆ ಮನವಿಯನ್ನೂ ಸಲ್ಲಿಸಲಾಯಿತು.

Edited By :
Kshetra Samachara

Kshetra Samachara

10/05/2022 01:08 pm

Cinque Terre

5.37 K

Cinque Terre

0

ಸಂಬಂಧಿತ ಸುದ್ದಿ