ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಆರ್ಯರ ಆಕ್ರಮಣ ಬುಡವಿಲ್ಲದ ವಾದವೆಂಬುದು ಗ್ರೀಕ್, ಲ್ಯಾಟಿನ್ ಅಧ್ಯಯನದಿಂದ ಸ್ಪಷ್ಟ: ಶತಾವಧಾನಿ ಆರ್.ಗಣೇಶ್

ಮಂಗಳೂರು: ಗ್ರೀಸ್ ಪಾಶ್ಚಾತ್ಯ ದೇಶಗಳಿಗೆ ಹೇಗೆ ಸಾಂಸ್ಕೃತಿಕ ತೊಟ್ಟಿಲೋ, ಅದೇ ರೀತಿ ಪೌರಾತ್ಯ ದೇಶಗಳಿಗೆ ಸಮಗ್ರವಾಗಿ ಸಾಂಸ್ಕೃತಿಕ ತೊಟ್ಟಿಲು ಎಂಬ ವಾದ ನಿಸ್ಸಂಶಯ. ಆದ್ದರಿಂದಲೇ ಆರ್ಯರ ಆಕ್ರಮಣವೆಂಬುದು ಬುಡವಿಲ್ಲದ ವಾದ. ಇದು ನನ್ನ ಗ್ರೀಕ್, ಲ್ಯಾಟಿನ್ ಭಾಷೆಯ ಅಧ್ಯಯನದಿಂದ ಸ್ಪಷ್ಟವಾಗಿದೆ ಎಂದು ಶತಾವಧಾನಿ ಡಾ. ಆರ್ ಗಣೇಶ್ ಹೇಳಿದರು.

ನಗರದ ಓಶಿಯನ್ ಪರ್ಲ್ ಹೊಟೇಲ್ ಸಭಾಂಗಣದಲ್ಲಿ ನಡೆದ ಲಿಟ್ ಫೆಸ್ಟ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆದ್ದರಿಂದ ಯಾವುದೇ ಸಾಹಿತ್ಯ ಕೃತಿಗಳ ಮೂಲಗ್ರಂಥಗಳನ್ನು ಅದೇ ಭಾಷೆಯಲ್ಲಿ ಅಧ್ಯಯನ ಮಾಡದೆ ನಮಗೆ ನಿಶ್ಚಯವಾಗೋದಿಲ್ಲ ಎಂದರು.

ಯಕ್ಷಗಾನ ನಮ್ಮ ರಾಜ್ಯದ ಅಭಿಜಾತ ರಂಗಕಲೆಯ ಪ್ರತಿಫಲನ. ಹಾಗಾಗಿ ಸಂಸ್ಕೃತ ನಾಟಕ ಹೇಗಿತ್ತು ಎಂಬುದಕ್ಕೆ ನಮಗೆ ತಕ್ಷಣಕ್ಕೆ ಸಿಗುವ ರೆಫರೆನ್ಸ್ ಯಕ್ಷಗಾನ. ತೆಂಕು - ಬಡಗು ಯಕ್ಷಗಾನದಲ್ಲಿ ಈ ಪರಂಪರೆ ಭದ್ರವಾಗಿ ಉಳಿದಿದೆ. ಯಕ್ಷಗಾನದ ಕಲಾವಿದರಿಗೆ ಹೆಚ್ಚಿನ ವ್ಯವಸ್ಥೆ ಶಿಕ್ಷಣಗಳಿವೆ. ಆದ್ದರಿಂದ ಮೂಲಕ್ಕೆ ನೇರವಾದ ಸ್ಪಂದನೆ ದೊರಕುತ್ತದೆ ಎಂದು ಶತಾವಧಾನಿ ಡಾ.ಆರ್. ಗಣೇಶ್ ಹೇಳಿದರು.

Edited By :
Kshetra Samachara

Kshetra Samachara

08/04/2022 05:33 pm

Cinque Terre

5.33 K

Cinque Terre

0