ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಾರ್ಕೂರು: ಗಾಳಿ ಮಳೆಗೆ ಬಿದ್ದ ಮರ ತೆರವು ಮಾಡಿಲ್ಲ: ಮನೆಯವರಿಗೆ ನಿದ್ದೆ ಇಲ್ಲ!

ಬಾರ್ಕೂರು: ಇಲ್ಲಿನ ಗ್ರಾಮಪಂಚಾಯಿತಿ ಬಳಿಯ ಗಣಪತಿ ನಾಯಕ್ ಎಂಬವರ ಮನೆಯ ಮೇಲೆ ಕಳೆದ ವಾರ ಸುರಿದ ಬಾರೀ ಗಾಳಿ ಮಳೆಗೆ ಬೃಹತ್ ಗಾತ್ರದ ಮರವೊಂದು ಬಿದ್ದು ಸಾಕಷ್ಟು ಹಾನಿಯಾಗಿತ್ತು.ಆದರೆ ಮರ ಬಿದ್ದು 10 ದಿನ ಕಳೆದರೂ ಮರವನ್ನು ತೆರವು ಮಾಡಿಲ್ಲ ,ಇದರಿಂದಾಗಿ ಮನೆಮಂದಿಗೆ ನೆಮ್ಮದಿಯ ನಿದ್ದೆ ಮಾಡಲೂ ಆಗುತ್ತಿಲ್ಲ.

ಬಾರಕೂರು ಗ್ರಾಮ ಪಂಚಾಯತಿ ಹಿಂಭಾಗದಲ್ಲಿರುವ ಹೆಂಚಿನ ಮನೆಯ ಮೇಲೆ ಮರ ಬೀಳುವಾಗ ಗಣಪತಿ ನಾಯಕ್‌ರ ಮನೆಯ ಎದುರು ಭಾಗದಲ್ಲಿದ್ದ ತೆಂಗಿನ ಮರ ತುಂಡಾಗಿ ಬಿದ್ದು ಮನೆ ಭಾಗಶ: ಹಾನಿಗೊಂಡಿತ್ತು.ಅಡುಗೆ ಮನೆಯ ಮೇಲೆ ಮರ ಬಿದ್ದ ರಭಸಕ್ಕೆ ಪಕ್ಕಾಸು, ರೀಪುಗಳು ತುಂಡಾಗಿ ಈಗ ಮನೆ ಸೋರುತ್ತಿದೆ.ಮರ ಬಿದ್ದ ದಿನವೇ ಇಲ್ಲಿನ ಗ್ರಾಮ ಲೆಕ್ಕಿಗರು ಬಂದು ಪರಿಶೀಲನೆ ಮಾಡಿ ಹಾನಿಯ ವರದಿ ಮಾಡಿದ್ದಾರೆ.

ವಯಸ್ಕರು ಮಾತ್ರ ಇರುವ ಈ ಮನೆಯಲ್ಲಿ ಹತ್ತು ದಿನ ಕಳೆದರೂ ಯಾರೂ ಮರ ತೆರವು ಮಾಡಲು ಬಂದಿಲ್ಲ.ಇನ್ನು ಈ ಮನೆಯ ಗೋಡೆ ಕುಸಿದು ಬೀಳುವ ಹಂತದಲ್ಲಿದೆ. ಆದರೆ ಮರವನ್ನು ತೆರವು ಮಾಡಲು ಮಾತ್ರ ಯಾವ ಇಲಾಖೆ ಕೂಡಾ ಬಂದಿಲ್ಲ ಎನ್ನುವುದು ಮನೆಯವರ ಕೊರಗು. ಸ್ಥಳೀಯಾಡಳಿತ ಇವರ ಸಮಸ್ಯೆಗೆ ಕೂಡಲೇ ಸ್ಪಂದಿಸಬೇಕಾಗಿದೆ.

Edited By : Nagesh Gaonkar
Kshetra Samachara

Kshetra Samachara

26/07/2022 10:37 am

Cinque Terre

8.58 K

Cinque Terre

0