ಸುರತ್ಕಲ್: ಸುರತ್ಕಲ್ ಪರಿಸರದಲ್ಲಿ ಸೋಮವಾರ ರಾತ್ರಿ ಎಂಆರ್ ಪಿ ಎಲ್ ಕಂಪನಿಯ ಕೊಳವೆಗಳಲ್ಲಿ ದಟ್ಟ ಹೊಗೆ ಆವರಿಸಿದ್ದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ಪರಿಸರ ಇಲಾಖೆಯ ನಿಯಮಗಳನ್ನು ಗಾಳಿಗೆ ತೂರಿ ಏಕಾಏಕಿ ಕಂಪನಿಯು ದಟ್ಟವಾದ ಹೊಗೆಯನ್ನು ಸಾರ್ವಜನಿಕವಾಗಿ ಬಿಡುತ್ತಿದ್ದು ಪರಿಸರ ಮಾಲಿನ್ಯದಿಂದ ರೋಗರುಜಿನಗಳ ಭೀತಿ ಎದುರಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಮುನೀರ್ ಕಾಟಿಪಳ್ಳ ಆರೋಪಿಸಿದ್ದಾರೆ.
ಎಂ ಆರ್ ಪಿ ಎಲ್ ಅಕ್ರಮಗಳ ಬಗ್ಗೆ ಅನೇಕ ಹೋರಾಟ ನಡೆಸುತ್ತಿದ್ದರೂ ಜನಪ್ರತಿನಿಧಿಗಳು ಮೌನವಾಗಿದ್ದಾರೆ ಎಂದು ಹೇಳಿರುವ ಅವರು ಮುಂದಿನ ದಿನಗಳಲ್ಲಿ ಕಂಪನಿಯ ಪರಿಸರ ಮಾಲಿನ್ಯದ ವಿರುದ್ಧ ಮತ್ತಷ್ಟು ಹೋರಾಟ ಸಂಘಟಿಸಲಾಗುವುದು ಎಂದರು.
Kshetra Samachara
19/07/2022 08:52 am