ಕಾಪು: ತೆಂಕ ಎರ್ಮಾಳ್ ಗ್ರಾ.ಪಂ. ವ್ಯಾಪ್ತಿಯ ಶ್ಯಾಮ ಪೂಜಾರಿ ಎಂಬವರ ಮನೆ ಸಂಪೂರ್ಣ ಧರಾಶಾಹಿಯಾಗಿದ್ದು, ಏಳು ಲಕ್ಷ ರೂ. ಅಧಿಕ ನಷ್ಟ ಸಂಭವಿಸಿದೆ.
ಭಾರೀ ಮಳೆಗೆ ಬೃಹತ್ ನೆರೆ ಉಂಟಾಗಿದ್ದು, ಇದನ್ನು ಗಮನಿಸಿದ ಮನೆಮಂದಿ ಬೇರೆಡೆಗೆ ಸ್ಥಳಾಂತರವಾಗಿದ್ದರಿಂದ ನಡೆಯಬಹುದಾಗಿದ್ದ ಪ್ರಾಣಹಾನಿ ತಪ್ಪಿದೆ. ಆದರೆ, ಮನೆ ಸಂಪೂರ್ಣ ಧ್ವಂಸಗೊಂಡಿರುವುದರಿಂದ ಸೂರು ಕಳೆದುಕೊಂಡ ಕುಟುಂಬ ಬೀದಿಗೆ ಬಿದ್ದಂತಾಗಿದೆ. ಕಂದಾಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಆದಷ್ಟು ಶೀಘ್ರವಾಗಿ ಸಂತ್ರಸ್ತ ಕುಟುಂಬಕ್ಕೆ ಸರ್ಕಾರ ಪರಿಹಾರ ಧನ ವಿತರಿಸುವ ಮೂಲಕ ಕುಟುಂಬದ ಸಮಸ್ಯೆಗೆ ಸ್ಪಂದಿಸುವಂತೆ ಮಾಜಿ ಗ್ರಾ.ಪಂ. ಸದಸ್ಯ ಬಾಲಚಂದ್ರ ಒತ್ತಾಯಿಸಿದ್ದಾರೆ.
Kshetra Samachara
21/09/2020 06:03 pm