ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಆಚಸುಳ್ಯ ಶಾಂತಿನಗರ ಕ್ರೀಡಾಂಗಣದ‌ ಮಣ್ಣು ಹರಿದು ಮನೆ, ಕೃಷಿ ಭೂಮಿಗೆ ತೊಂದರೆ: ಪರಿಹಾರಕ್ಕೆ ಸ್ಥಳೀಯರ ಮನವಿ

ಸುಳ್ಯ: ಶಾಂತಿನಗರದಲ್ಲಿ ನಿರ್ಮಾಣಗೊಳ್ಳುತ್ತಿರುವ ತಾಲೂಕು ಕ್ರೀಡಾಂಗಣದ ಕಾಮಗಾರಿ ನಡೆಯುವಾಗ ಬದಿಯಲ್ಲಿ ತುಂಬಿಟ್ಟಿರುವ ಮಣ್ಣು ಮಳೆ ಬರುವಾಗ ಕೊಚ್ಚಿ ಹೋಗಿ ಕ್ರೀಡಾಂಗಣದ ಕೆಳ ಭಾಗದ ಕೃಷಿ ಭೂಮಿ, ಮನೆಗಳಿಗೆ ತೊಂದರೆ ಉಂಟಾಗುತಿದೆ. ಆದ್ದರಿಂದ‌ ಇಲ್ಲಿ ಸೂಕ್ತವಾದ ತಡೆಗೋಡೆ ನಿರ್ಮಿಸಿ ಮನೆ ಮತ್ತು ಕೃಷಿಗೆ ರಕ್ಷಣೆ ನೀಡಬೇಕು ಎಂದು ಪ್ರದೇಶದ ಸಾರ್ವಜನಿಕರು ಸಚಿವ ಎಸ್. ಅಂಗಾರ ಅವರಿಗೆ‌ ಮನವಿ ಸಲ್ಲಿಸಿದ್ದಾರೆ.

ಸ್ಟೇಡಿಯಂನ ವಿಸ್ತರಣೆಯ ಭಾಗವಾಗಿ ಇದರ ದಕ್ಷಿಣ ಭಾಗಗಕ್ಕೆ ಅಪಾರ ಪ್ರಮಾಣದಲ್ಲಿ ಮಣ್ಣು ತುಂಬಿಸಿಡಲಾಗಿದೆ.ಆದರೆ ಈ ಭಾಗದ ಪುಟ್ಟ ಚರಂಡಿಯಲ್ಲಿ ಕಳೆದ ಹಲವು ವರ್ಷಗಳಿಂದ ಒಟ್ಟು ಸೇಡಿಯಂನ ಪೂರ್ಣ ಪ್ರಮಾಣದ ನೀರು ಹೊರಹೋಗುತ್ತಿದ್ದು ಅನೇಕ ಸಂದರ್ಭದಲ್ಲಿ ಅಗಾಧ ಪ್ರಮಾಣದ ಮಣ್ಣನ್ನು ಕೊಚ್ಚಿಕೊಂಡು ಹೋಗಿ ಅನಾಹುತ ಮಾಡಿರುತ್ತದೆ . ಇದೀಗ ನಮ್ಮ ಮನೆಗಳ ಕೆಲವೇ ಮೀಟರ್‌ಗಳ ಅಂತರದಲ್ಲಿ ಸುಮಾರು 30 ಮೀಟರ್‌ಗಿಂತಲೂ ಹೆಚ್ಚಿನ ಎತ್ತರದ ಮಣ್ಣಿನ ರಾಶಿ ಬಿದ್ದಿರುತ್ತದೆ. ಈ ಬೃಹತ್ ಮಣ್ಣಿನ ರಾಶಿಯಿಂದ ಮುಂದಿನ ಮಳೆಗಾಲದಲ್ಲಿ ಅಪಾಯ ಉಂಟಾಗುವ ಸಾಧ್ಯತೆ ಹೆಚ್ಚಿದೆ ಎನ್ನುವುದು ನಮ್ಮ ಆತಂಕ . ಹೀಗಾಗಿ ಮುಂದಿನ ಮಳೆಗಾಲವನ್ನು ಕಳೆಯುವುದು ಹೇಗೆಂಬ ಆತಂಕದಲ್ಲೂ ನಾವಿದ್ದೇವೆ. ಆದ್ದರಿಂದ ಈ ಮಣ್ಣಿನ ರಾಶಿ ಕೆಳಗೆ ಜಾರದಂತೆ ತಡೆಗೋಡೆ ಹಾಗೂ ಈ ಮಣ್ಣು ನೀರಿನಲ್ಲಿ ಕೊಚ್ಚಿ ಹೋಗದಂತೆ ಸೂಕ್ತ ಯೋಜಿತ ವ್ಯವಸ್ಥೆಯನ್ನು ಈ ಮಳೆಗಾಲ

ಆರಂಭವಾಗೊಳ್ಳುವ ಮುನ್ನ ಕೈಗೊಳ್ಳುವಂತೆ ಸಂಬಂಧಪಟ್ಟವರಿಗೆ ನಿರ್ದೇಶನ ನೀಡಬೇಕು.ಆ ಮೂಲಕ ನಮಗೆ ಹಾಗೂ ಕೃಷಿಭೂಮಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಮನವಿಯಲ್ಲಿ ವಿನಂತಿಸಲಾಗಿದೆ. ಸೂಕ್ತ ವ್ಯವಸ್ಥೆ ಕೈಗೊಳ್ಳುವುದಾಗಿ ಸಚಿವರು ಹೇಳಿದರು. ಪ್ರದೇಶದ ನಿವಾಸಿಗಳಾದ ಡಾ.ಸುಂದರ್ ಕೇನಾಜೆ, ಗೌರಿಶಂಕರ ಬೆಟ್ಟಂಪಾಡಿ, ನವನೀತ ಬೆಟ್ಟಂಪಾಡಿ ಮತ್ತಿತರರು ಮನವಿ ಸಲ್ಲಿಸಿದರು. ನಗರ ಪಂಚಾಯತ್ ಅಧ್ಯಕ್ಷ ವಿನಯಕುಮಾರ್ ಕಂದಡ್ಕ, ಸದಸ್ಯ ಬುದ್ಧ ನಾಯ್ಕ್ ಮತ್ತಿತರರು ಉಪಸ್ಥಿತರಿದ್ದರು.

Edited By : Nagaraj Tulugeri
Kshetra Samachara

Kshetra Samachara

25/04/2022 11:06 pm

Cinque Terre

9.64 K

Cinque Terre

0

ಸಂಬಂಧಿತ ಸುದ್ದಿ