ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೂಡುಬಿದಿರೆ : ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮೂಡುಬಿದಿರೆ ಆರೋಗ್ಯ ಸಿಬಂದಿಗಳಿಂದ ಪ್ರತಿಭಟನೆ

ಮೂಡುಬಿದಿರೆ : ಕಳೆದ ಹಲವು ವರ್ಷಗಳ ಬೇಡಿಕೆಗಳಾಗಿರುವ ಸಮಾನ ಕೆಲಸಕ್ಕೆ ಸಮಾನ ವೇತನ, ಸೇವಾ ಭದ್ರತೆ ಮತ್ತು ಇತರೆ ಒಟ್ಟು 14 ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಗುತ್ತಿಗೆ ಹಾಗೂ ಹೊರ ಗುತ್ತಿಗೆ ನೌಕರ ಸಂಘ (ರಿ) ಮೂಡುಬಿದಿರೆಯ ವತಿಯಿಂದ ತಹಶೀಲ್ದಾರ್ ಕಛೇರಿ ಎದುರು ಶನಿವಾರ "ಅನಿರ್ದಿಷ್ಟಾವಧಿ ಮುಷ್ಕರ" ನಡೆಯಿತು.

ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಮುಷ್ಕವನ್ನುದ್ದೇಶಿಸಿ ಮಾತನಾಡಿ ಸರಿಯಾದ ವೇತನ ಹಾಗೂ ಸೇವಾ ಭದ್ರತೆಯಿಲ್ಲದೆ ಕಳೆದ 20ವರ್ಷಗಳಿಂದ ಗುತ್ತಿಗೆ ಹಾಗೂ ಹೊರಗುತ್ತಿಗೆಯ ಮೂಲಕ ನೌಕರರು ದುಡಿಯುತ್ತಿದ್ದಾರೆ. ಕುಟುಂಬ ನಿರ್ವಹಣೆ ಸಹಿತ ಇತರ ಖರ್ಚು ವೆಚ್ಚಗಳನ್ನು ಭರಿಸಲು ಅಸಹಾಯಕರಾಗಿರುವ ಸಿಬಂಧಿಗಳಿಗೆ ಸರಕಾರಿ ನೌಕರರಿಗೆ ನೀಡುವ ವೇತನ ಮತ್ತು ಸೇವಾ ಭದ್ರತೆಯನ್ನು ಸರಕಾರವು ಒದಗಿಸುವುದು ಅವಶ್ಯವಾಗಿದೆ ಎಂದು ಆಗ್ರಹಿಸಿದರು.

ಬೇಡಿಕೆ ಈಡೇರದಿದ್ದರೆ ಮುಷ್ಕರ ಹಿಂತೆಗೆಯುವುದಿಲ್ಲ : ಸಂಘದ ಮೂಡುಬಿದಿರೆ ತಾಲೂಕಿನ ಸಂಚಾಲಕ ವೆಂಕಟ್‍ಕೃಷ್ಣ ಮಾತನಾಡಿ ಸೇವಾ ಭದ್ರತೆ ಹಾಗೂ ಜೀವ ಭದ್ರತೆಯಿಲ್ಲದೆ ಬದುಕುವುದು ಕಷ್ಟ ಸಾಧ್ಯವಾಗಿದ್ದು ಸಮಾನ ಕೆಲಸಕ್ಕೆ ಸಮಾನ ವೇತನವನ್ನು ನೀಡುವಂತೆ ಆಗ್ರಹಿಸುತ್ತಿದ್ದೇವೆ. ಸರಕಾದ ಜೊತೆಗೆ ಮನವಿ ಮಾಡಿದ್ದರೂ ಈವರೆಗೆ ಪ್ರಯೋಜನವಾಗಿಲ್ಲ. ಕಳೆದ ಮೂರು-ನಾಲ್ಕು ತಿಂಗಳ ಹಿಂದೆ ಮಾನವ ಸಂಪನ್ಮೂಲ ಸಮಿತಿಯೊಂದು ರಚನೆಯಾಗಿದ್ದು ಈ ಸಂದರ್ಭ ತಮ್ಮ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದ್ದರೂ ಆದರೆ 3 ತಿಂಗಳು ಕಳೆದರೂ ಜೀತದ ರೀತಿಯಲ್ಲಿ ದುಡಿಸುವುದು ನಿಂತಿಲ್ಲವೆಂದು ಬೇಸರ ವ್ಯಕ್ತಪಡಿಸಿದ ಅವರು ರಾಜ್ಯದ 30,000 ನೌಕರರು ಕಳೆದ 10 ದಿನಗಳಿಂದ ಮುಷ್ಕರ ಮಾಡುತ್ತಿದ್ದು ತಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಮುಷ್ಕರವನ್ನು ಹಿಂತೆಗೆಯಾರೆವು ಎಂದು ಎಚ್ಚರಿಸಿದರು.

ತಹಶೀಲ್ದಾರ್ ಗುರುಪ್ರಸಾದ್ ಅವರ ಮೂಲಕ ಸರಕಾರಕ್ಕೆ ಮನವಿಯನ್ನು ಸಲ್ಲಿಸಲಾಯಿತು. ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರು ಈ ಮುಷ್ಕರದ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿದ್ದರು.

Edited By : Nagesh Gaonkar
Kshetra Samachara

Kshetra Samachara

03/10/2020 07:21 pm

Cinque Terre

50.72 K

Cinque Terre

1

ಸಂಬಂಧಿತ ಸುದ್ದಿ