ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರ್ಕಳದ ಜನರನ್ನು ಕಾಡಿದ್ದ ಕಾಳಿಂಗ ಕೊನೆಗೂ ಕಾಡಿಗೆ

ಕಾರ್ಕಳ: ಕಳೆದ ಕೆಲವು ದಿನಗಳಿಂದ ಕಾರ್ಕಳದ ಜನತೆಯಲ್ಲಿ ಆತಂಕ ಮೂಡಿಸಿದ್ದ ಕಾಳಿಂಗ ಸರ್ಪವನ್ನು ಉರಗ ತಜ್ಞ ಅನಿಲ್ ಪ್ರಭು ಕೊನೆಗೂ ಸೆರೆಹಿಡಿದ್ದಾರೆ. ಇಲ್ಲಿನ ಅನಂತಶಯನ ತೆಳ್ಳಾರು ರಸ್ತೆಯ ವಕೀಲರ ಮನೆಯೊಂದರ ಬಳಿ ತಿರುಗಾಡುತ್ತಿದ್ದುದನ್ನು ಪುರಸಭಾ ಸದಸ್ಯ ಶುಭದರ್ ಗಮನಕ್ಕೆ ತಂದಿದ್ದರು. ಕೂಡಲೇ ಅನಿಲ್ ಪ್ರಭು ಅವರನ್ನು ಸ್ಥಳಕ್ಕೆ ಕರೆಸಿ ಕಾಳಿಂಗ ಸರ್ಪವನ್ನು ಸೆರೆಹಿಡಿಯಲಾಯಿತು.

ಸುಮಾರು 14 ಅಡಿ ಉದ್ದದ ಕಾಳಿಂಗ ಸರ್ಪವನ್ನು ಉಪ ವಲಯ ಅರಣ್ಯಾಧಿಕಾರಿ ಪ್ರಕಾಶ್ ಅವರ ಸಮ್ಮುಖದಲ್ಲಿ ಕುದುರೆಮುಖ ಅರಣ್ಯಕ್ಕೆ ಕೊಂಡೊಯ್ಯುವ ವ್ಯವಸ್ಥೆ ಮಾಡಲಾಯಿತು.

ಈ ಸಂದರ್ಭ ಮಾತನಾಡಿದ ಪುರಸಭೆ ಸದಸ್ಯ ಶುಭದ ರಾವ್, ಅನೇಕ ಸಮಯಗಳಿಂದ ಕಾಳಿಂಗ ಸರ್ಪಗಳು ನಗರ ಪ್ರದೇಶಕ್ಕೆ ಬರಲು ಆರಂಭಿಸಿವೆ. ಅವನ್ನು ಹಿಡಿಯುವ ಸೂಕ್ತ ಕ್ರಮ ಇಲಾಖೆಯಿಂದ ಮಾಡಬೇಕು ಅಥವಾ ಇಲಾಖೆಯಿಂದಲೇ ಅನಿಲ್ ಪ್ರಭುರವರಂಥವರಿಗೆ ಅಧಿಕೃತವಾಗಿ ಹಾವು ಹಿಡಿಯುವ ಅವಕಾಶ ಮಾಡಿಕೊಟ್ಟು ಆದೇಶ ಕೊಡಬೇಕು. ಇಲ್ಲದಿದ್ದರೆ ವಿಷಕಾರಿ ಹಾವು ಹಿಡಿಯುವ ಸಂದರ್ಭ ಪ್ರಾಣಾಪಾಯ ಆಗುವ ಸಂಭವವಿರುತ್ತದೆ. ಅನಿಲ್ ಪ್ರಭು ಅವರಿಗೆ ಭದ್ರತೆ ಒದಗಿಸಿಕೊಡಬೇಕು ಹಾಗೂ ಸರ್ಕಾರದಿಂದ ವೇತನ ನೀಡುವ ವ್ಯವಸ್ಥೆ ಮಾಡಬೇಕು ಎಂದು ಹೇಳಿದರು.

Edited By : Somashekar
PublicNext

PublicNext

11/10/2022 05:53 pm

Cinque Terre

30.75 K

Cinque Terre

1

ಸಂಬಂಧಿತ ಸುದ್ದಿ