ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಅನಾಥ ಶವಗಳ ಅಂತ್ಯ ಸಂಸ್ಕಾರ; ಇದು ನಿತ್ಯಾನಂದರ ನಿತ್ಯದ ಕಾಯಕ!

ಉಡುಪಿ: ಉಡುಪಿ ಆಸುಪಾಸಿನಲ್ಲಿ ಅನಾಥ, ಆಸರೆ ಇಲ್ಲದ ವ್ಯಕ್ತಿಗಳು ಯಾರೇ ಅನಾರೋಗ್ಯಗೊಂಡರೂ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವುದರಿಂದ ಹಿಡಿದು ಕೊನೆಗೆ ಅವರ ಅಂತ್ಯಸಂಸ್ಕಾರದ ತನಕದ ಸೇವೆ ಮಾಡುವವರು ನಿತ್ಯಾನಂದ ಒಳಕಾಡು. ಹೀಗಾಗಿ ಅವರು ಉಡುಪಿಯ ಜನತೆಗೆ ಚಿರಪರಿಚಿತರು. ಸರಕಾರಿ ಜಿಲ್ಲಾಸ್ಪತ್ರೆಯ ಶವಗಾರದಲ್ಲಿ ರಕ್ಷಿಸಿಡಲಾಗಿದ್ದ ಮತ್ತೆರಡು ಅಪರಿಚಿತ ಶವಗಳ ಅಂತ್ಯಸಂಸ್ಕಾರ ನಡೆಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಅವರ ಈ ಸೇವಾ ಬದುಕಿನಲ್ಲಿ ನೂರಕ್ಕೂ ಮಿಕ್ಕಿ ಅನಾಥ ಶವಗಳಿಗೆ ಗೌರವಯುತ ಅಂತ್ಯ ಸಂಸ್ಕಾರ ನಡೆಸಿದ್ದಾರೆ.ಇದೇನೂ ಸಾಮಾನ್ಯ ಕೆಲಸವಲ್ಲ. ಕೊರೊನಾ ಕಾಲದಲ್ಲಿ ಬಂಧುಗಳು ಹತ್ತಿರ ಬರಲೂ ಭಯಪಡುತ್ತಿರುವಾಗ ಇವರು ಪಿಪಿಇ ಕಿಟ್ ಹಾಕಿಕೊಂಡು ಅಂತ್ಯಸಂಸ್ಕಾರ ನಡೆಸಿದ ಉದಾಹರಣೆಗಳಿವೆ. ಅವರ ಈ ಕಾಯಕಕ್ಕೆ ನಗರಸಭೆ, ನಗರ ಪೋಲಿಸ್ ಠಾಣೆ ಮತ್ತು ದಾನಿಗಳು ಸಹಕಾರ ನೀಡಿರಬಹುದು. ಆದರೆ ಖುದ್ದು ಹಾಜರಾಗಿ, ಸ್ವತಃ ತಾವೇ ಮಣ್ಣು ಮಾಡಿ ಅನಾಥ ಜೀವವೊಂದಕ್ಕೆ ಕೊನೆಯ ಗೌರವ ಸಲ್ಲಿಸುವವರು ಮಾತ್ರ ಇವರೇ. ಇಷ್ಟೇ ಅಲ್ಲದೆ ಜಿಲ್ಲಾ ನಾಗರಿಕ ಸಮಿತಿ ಮೂಲಕ ನಿತ್ಯಾನಂದರು ಹಲವು ಸಮಾಜಮುಖಿ ಸೇವೆಗಳಲ್ಲಿ ನಿರತರಾಗಿದ್ದಾರೆ. ಉಡುಪಿ ಮಾತ್ರವಲ್ಲ ಯಾವುದೇ ಜಿಲ್ಲೆಯಲ್ಲೂ ಇಂತಹ ಮಾನವೀಯ ಅಂತಃಕರಣ ಇರುವ ವ್ಯಕ್ತಿಗಳು ಸಿಗುವುದು ಅಪರೂಪ ಎಂದರೂ ತಪ್ಪಲ್ಲ. ಅವರ ಈ ಮಾನವೀಯ ಸೇವೆ ನಿರಂತರವಾಗಲಿ ನಡೆಯುತ್ತಿರಲಿ.

Edited By :
PublicNext

PublicNext

02/06/2022 09:04 pm

Cinque Terre

59.58 K

Cinque Terre

5

ಸಂಬಂಧಿತ ಸುದ್ದಿ