ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಂಟ್ವಾಳ: ಮೆಲ್ಕಾರ್ ನಲ್ಲಿ ಮೂಲಭೂತ ಸೌಕರ್ಯಗಳು ಮರೀಚಿಕೆ

ಬಂಟ್ವಾಳ: ನಗರದ ಪುರಸಭೆ ವ್ಯಾಪ್ತಿಯ ಮೆಲ್ಕಾರ್ ವಾರ್ಡ್ 26 ರ ರಾಮನಗರ ಎಂಬ ಪ್ರದೇಶದಲ್ಲಿ ವಾಸಿಸುತ್ತಿರುವ ಸುಮಾರು 25ಕ್ಕೂ ಅಧಿಕ ಕುಟುಂಬಗಳ ಕಷ್ಟ ಹೇಳತೀರದಂತಾಗಿದೆ.

ಇಲ್ಲಿನ ಪ್ರವೇಶದ್ವಾರ ಅತ್ಯಂತ ಕಿರಿದಾಗಿದ್ದು, ಒಳಗಿನ ದಾರಿ ಹಿರಿದಾಗಿದೆ,ಸ್ಕೂಟರ್ ನಂಥ ದ್ವಿಚಕ್ರ ವಾಹನಗಳಷ್ಟೇ ಬರಲು ಸಾಧ್ಯವಾಗುವಂಥ ಸ್ಥಿತಿ ಇರುವುದರಿಂದ ದಿನ ನಿತ್ಯ ಇಲ್ಲಿನ ಜನರ ಗೋಳು ಮುಗಿಯದ ನೋವಾಗಿದೆ.

ಮನೆಗೆ ಏನಾದರು ಸಾಮಗ್ರಿಗಳು ಬೇಕೆಂದರು ತಲೆ ಮೇಲೆ ಹೊತ್ತು ತರಬೇಕು, ಆರೋಗ್ಯ ಹದಗೆಟ್ಟರು ಆ್ಯಂಬುಲೆನ್ಸ್ ಗೂ ಅರ್ಧ ಕಿಲೋ ಮೀಟರ್ ನಡಿಯುವಂತಹ ಪರಿಸ್ಥಿತಿ.

ಅಂಗವಿಕಲರು, ವಿದ್ಯಾರ್ಥಿಗಳು, ವೃದ್ಧರು, ಮಹಿಳೆ ಸಹಿತ ಕಷ್ಟದಲ್ಲಿ ವಾಸಿಸುವ ಬಡ ಕುಟುಂಬ ಮೂಲಭೂತ ಸೌಕರ್ಯಗಳಿಲ್ಲದೇ ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ. ಒಟ್ಟಿನಲ್ಲಿ ಸಮಸ್ಯೆಯ ಕೂಪವಾಗಿರುವ ಈ ಪ್ರದೇಶದ ಜನರು ಶಾಶ್ವತ ಪರಿಹಾರಕ್ಕಾಗಿ ಎದುರು ನೋಡುತ್ತಿದ್ದಾರೆ. ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.

Edited By : Nagesh Gaonkar
Kshetra Samachara

Kshetra Samachara

19/02/2022 08:58 am

Cinque Terre

10.4 K

Cinque Terre

0

ಸಂಬಂಧಿತ ಸುದ್ದಿ