ವಿಶೇಷ ವರದಿ: ರಹೀಂ ಉಜಿರೆ
ಉಡುಪಿ: ಕೂಲಿ ಕೆಲಸ ಮಾಡುವ ಯುವಕನಿಗೆ ಒಂದು ಕೋಟಿ ಹಣವನ್ನು ಬಡ ಮಕ್ಕಳ ಚಿಕಿತ್ಸೆಗೆ ವ್ಯಯಿಸಲು ಸಾಧ್ಯವೇ? ಹೋಗಲಿ ಬಿಡಿ, ಕೂಲಿ ಮಾಡುವ ವ್ಯಕ್ತಿಗೆ ಒಂದು ಕೋಟಿ ಹಣ ದುಡಿಯಲು ಸಾಧ್ಯವೇ? ಇಲ್ಲ ಎಂಬುದು ನಿಮ್ಮ ಉತ್ತರವಾಗಿರಬಹುದು. ಆದರೆ, ಇದನ್ನು ಸಾಧಿಸಿ ತೋರಿಸಿದವರು ರವಿ ಕಟಪಾಡಿ!ಯಾರಿವರು? ಈ ಸ್ಟೋರಿ ನೋಡಿ...
ಈ ಯುವಕನನ್ನೊಮ್ಮೆ ನೋಡಿ... ಮುಖದಲ್ಲಿ ವೇಷದ ಬಣ್ಣ ಇನ್ನೂ ಹಾಗೇ ಇದೆ. ಕಳೆದ ಏಳು ವರ್ಷಗಳಿಂದ ಶ್ರೀಕೃಷ್ಣ ಜನ್ಮಾಷ್ಟಮಿಯಂದು ವಿಶಿಷ್ಟ ರೀತಿಯ ವೇಷ ಧರಿಸಿ ಹಣ ಸಂಗ್ರಹಿಸುವುದು ಇವರ ಹಾಬಿ. ಹಾಬಿ ಅನ್ನೋದಕ್ಕಿಂತ ಮಾನವೀಯ ಗುಣ ಅನ್ನಿ. ಸಂಗ್ರಹವಾದ ಅಷ್ಟೂ ಹಣವನ್ನು ಇವರು ಅನಾರೋಗ್ಯ ಪೀಡಿತ ಮಕ್ಕಳ ಚಿಕಿತ್ಸೆಗೆ ವ್ಯಯಿಸಿದ್ದಾರೆ! ನೀವು ನಂಬಲೇಬೇಕು... ರವಿ ಕಟಪಾಡಿ ಕಳೆದ ಏಳು ವರ್ಷಗಳಿಂದ ವೇಷ ಹಾಕಿ ಸಂಗ್ರಹವಾದ ಒಟ್ಟು 90 ಲಕ್ಷ ರೂ. ವನ್ನು ಹಲವು ಮಕ್ಕಳ ಚಿಕಿತ್ಸೆಗೆ ನೀಡಿದ್ದಾರೆ. ಈ ವರ್ಷವೂ ವಿಶಿಷ್ಟ ವೇಷ ಹಾಕಿ ಹತ್ತು ಲಕ್ಷ ಹಣ ಸಂಗ್ರಹಿಸಬೇಕು, ಅದನ್ನು ರೋಗಿಗಳಿಗೆ ನೀಡುವ ಮೂಲಕ ಒಂದು ಕೋಟಿ ಹಣ ಸಮಾಜಕ್ಕೆ ವ್ಯಯಿಸಿದಂತಾಗಬೇಕು ಎಂಬುದು ಇವರ ಮಹದಾಸೆ!
ನಿಜಕ್ಕೂ ಇಂಥವರು ಕೋಟಿಗೊಬ್ಬರು...! ಅಲ್ವೇ?
ಈವರೆಗೆ ಒಟ್ಟು 66 ಅನಾರೋಗ್ಯ ಪೀಡಿತ ಮಕ್ಕಳ ಚಿಕಿತ್ಸೆಗೆ ಈ ವೇಷಧಾರಿ ಆಶಾಕಿರಣವಾಗಿದ್ದಾರೆ. ಈ ವರ್ಷ ಆ.19 ರಂದು ಮತ್ತು 20ರಂದು ವೇಷ ಧರಿಸಲು ಸಜ್ಜಾಗಿದ್ದಾರೆ. ಇದಕ್ಕಾಗಿ ಹೈದರಾಬಾದ್, ಮಂಗಳೂರು, ಮಡಿಕೇರಿ ಮತ್ತು ಕಟಪಾಡಿಯ ಒಟ್ಟು ಏಳು ಮಂದಿ ಕಲಾವಿದರು ವೇಷಕ್ಕಾಗಿ ಕಳೆದ ಒಂದು ತಿಂಗಳಿಂದ ಸಿದ್ಧತೆ ನಡೆಸುತ್ತಿದ್ದಾರೆ. ವೇಷ ಧರಿಸಿ ಉಡುಪಿ, ಮಲ್ಪೆ, ಕಟಪಾಡಿ, ಉದ್ಯಾವರಕ್ಕೆ ತೆರಳಿ ಸಾರ್ವ ಜನಿಕರಿಂದ ಹಣ ಸಂಗ್ರಹಿಸಲಾಗುತ್ತದೆ.
ಈ ವರ್ಷ ಸಂಗ್ರಹವಾದ ಹಣವನ್ನು ಅನಾರೋಗ್ಯ ಪೀಡಿತ ಕುಂದಾಪುರ, ಕಾರ್ಕಳ, ಮುಲ್ಕಿ, ಹೆಬ್ರಿ, ಕಟಪಾಡಿ, ಕಾಪುವಿನ ಒಟ್ಟು ಆರು ಮಕ್ಕಳ ಚಿಕಿತ್ಸೆಗೆ ನೀಡಲಿದ್ದಾರೆ. ಇವರ ಮಾನವೀಯ ಸೇವೆಗೆ ಕೈ ಜೋಡಿಸುವವರು
"ಪಾಂಗಾಳ ಬ್ರಾಂಚ್ , ಬ್ಯಾಂಕ್ ಆಫ್ ಬರೋಡಾ, ಎಸ್‌ಬಿ ಖಾತೆ ಸಂಖ್ಯೆ: 84350100001040ಗೆ ಜಮಾ ಮಾಡಬಹುದು.
PublicNext
18/08/2022 10:14 pm