ಕುಂದಾಪುರ: ಕುಂದಾಪುರದ ಮಂದಾರ್ತಿ ಎಂಬಲ್ಲಿ ಯಕ್ಷಗಾನವನ್ನ ತನ್ನ ಉಸಿರಾಗಿಸಿಕೊಂಡು ಜೀವನ ಮುನ್ನೆಡೆಸುತ್ತಿರುವ ಮಡಮಕ್ಕಿ ಗ್ರಾಮದ ಮುದ್ದಲೆಗಾರ ವಿಜಯ ನಾಯ್ಕ ಸದ್ಯ ಸಮಸ್ಯೆಯ ಸುಳಿಯಲ್ಲಿ ಸಿಲುಕಿದ್ದಾರೆ.
ಹೌದು ಈ ಬಡ ಕಲಾವಿದನ ಹೆಂಡತಿ ಕಾಯಿಲೆವೊಂದರಿಂದ ಬಳಲುತ್ತಿದ್ದು ಆಕೆಗೆ ಸೂಕ್ತ ಚಿಕಿತ್ಸೆ ಕೊಡಿಸಲಾಗದೇ ಕಲಾವಿದ ವಿಜಯ ನಾಯ್ಕ ತೀವ್ರ ಸಮಸ್ಯೆ ಎದುರಿಸುತ್ತಿದ್ದು ಸದ್ಯ ಸಹಾಯಕ್ಕಾಗಿ ಅಂಗಲಾಚಿದ್ದಾರೆ.
ಕೆಲ ತಿಂಗಳ ಹಿಂದೆ ಇವರ ಪತ್ನಿಗೆ ಬಾಯಿ ಕ್ಯಾನ್ಸರ್ ಇರುವುದು ಪತ್ತೆಯಾಗಿತ್ತು. ತಕ್ಷಣ ಚಿಕಿತ್ಸೆಗೆ ಮುಂದಾದ ವಿಜಯ್ ನಾಯ್ಕ್ ಈಗಾಗಲೇ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದು, ಇನ್ನಷ್ಟು ಚಿಕಿತ್ಸೆ ಕೊಡಿಸಿದಲ್ಲಿ ಮಾತ್ರ ಪತ್ನಿ ಉಳಿಯುವ ಸಂಭವವಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಸದ್ಯ ಹೆಂಡತಿಗೆ ಚಿಕಿತ್ಸೆ ಕೊಡಿಸಲು ಹೆಣಗಾಡುತ್ತಿರುವ ವಿಜಯ್ ನಾಯ್ಕ್ ರವರಿಗೆ ಹಣದಅವಶ್ಯಕತೆಯಿದ್ದು ಸಹಾಯ ಮಾಡಲು ಇಚ್ಚಿಸುವವರು ವಿಜಯ ಅವರ
ಬ್ಯಾಂಕ್ ಖಾತೆ ಸಂಖ್ಯೆ :81940100008584
Ifsc code:BARB0VJMAMU ಗೆ ಹಣ ಹಾಕಬಹುದು.
PublicNext
03/05/2022 01:29 pm