ಉಡುಪಿ: ರಾಜ್ಯ ರಸ್ತೆ ಸಾರಿಗೆ ನಿಗಮವು ರಾಜ್ಯ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ರಾಜ್ಯ ನೋಂದಾಯಿತ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರಿಗೆ ಉಚಿತ ಬಸ್ ಪಾಸ್ಗಳನ್ನು ಸರಕಾರದ ಇಡಿಸಿಎಸ್ ಇಲಾಖೆಯ ಸೇವಾ ಸಿಂಧು ಪೋರ್ಟಲ್ ಮೂಲಕ ಆನ್ಲೈನ್ನಲ್ಲಿ ವಿತರಣೆ ಮಾಡುತ್ತಿದೆ.
ಕಾರ್ಮಿಕರು ಯಾವುದೇ ಜಿಲ್ಲೆಯಲ್ಲಿ ನೋಂದಣಿಯಾಗಿದ್ದರೂ ಅವರು ಇಚ್ಛಿಸುವ ಪಾಸ್ನಲ್ಲಿ ನಮೂದಿಸಲಾಗುವ ಪ್ರಾರಂಭಿಕ ಸ್ಥಳದಿಂದ 7 ಹಂತಗಳ ವರೆಗೆ (ಗರಿಷ್ಠ 45 ಕಿ.ಮೀ.) ಉಚಿತವಾಗಿ ನಿಗಮದ ಬಸ್ಗಳಲ್ಲಿ ಪ್ರಯಾಣಿಸಲು ಅವಕಾಶವಿದೆ. ಪಾಸುದಾರರು ಕರಾರಸಾ ನಿಗಮ/ವಾಕರಸಾ ಸಂಸ್ಥೆ ಕಕರಸಾ ನಿಗಮಗಳ ನಗರ, ಸಾಮಾನ್ಯ/ಹೊರ ವಲಯ ಹಾಗೂ ವೇಗದೂತ ಬಸ್ ಗಳಲ್ಲಿ ಮಾತ್ರ ಪ್ರಯಾಣಿಸಲು ಅವಕಾಶವಿದೆ ಎಂದು ಪ್ರಕಟನೆ ತಿಳಿಸಿದೆ.
Kshetra Samachara
29/09/2022 04:57 pm