ಉಡುಪಿ: ಹಿಜಾಬ್ ವಿವಾದ ಸಂದರ್ಭದಲ್ಲೇ ಪಿಎಫ್‌ಐ, ಎಸ್‌ಡಿಪಿಐ ಮತ್ತು ಸಿಎಫ್‌ಐ ಸಂಘಟನೆಗಳು ದೇಶದ್ರೋಹಿ ಸಂಘಟನೆಗಳು ಎಂದು ಹೇಳಿದ್ದೆ. ಅದೀಗ ಸಾಬೀತಾಗಿದೆ.ಕೇಂದ್ರ ಸರಕಾರ ದೇಶದ ಜನರಿಗೆ ನವರಾತ್ರಿ ಸಿಹಿ ನೀಡಿದೆ ಎಂದು ಬಿಜೆಪಿ ಮುಖಂಡ ಯಶ್ ಪಾಲ್ ಸುವರ್ಣ ಹೇಳಿದ್ದಾರೆ.
ಉಡುಪಿಯ ತಮ್ಮ ಗೃಹ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಪ್ರಧಾನಿ ಮೋದಿ ಮತ್ತು ಅಮಿತ್ ಶಾಗೆ ಅಭಿನಂದನೆ ಹೇಳುತ್ತೇನೆ.ಈ ಸಂಘಟನೆಯಲ್ಲಿ ಸಕ್ರಿಯರಾದವರನ್ನು ತನಿಖೆಗೆ ಒಳಪಡಿಸಬೇಕು. ಹಿಜಾಬ್ ವಿವಾದದಲ್ಲಿ ಹೆಣ್ಣುಮಕ್ಕಳಿಗೆ ಕುಮ್ಮಕ್ಕು ನೀಡಿದವರನ್ನು ತನಿಖೆಗೆ ಒಳಪಡಿಸಿ ಕಠಿಣ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಇದೇ ವೇಳೆ ಮಾತನಾಡಿದ ಅವರು ವಕ್ಫ್ ಬೋರ್ಡ್ ಹಗರಣವನ್ನು ಪ್ರಸ್ತಾಪಿಸಿ, ವಕ್ಸ್ ಅಕ್ರಮದ ಹಣ ಪಿಎಫ್‌ಐ ಸಂಘಟನೆಯ ಕಾರ್ಯಕರ್ತರ ದೇಶದ್ರೋಹಿ ಚಟವಟಿಕೆಗಳಿಗಾಗಿ ಬಳಕೆಯಾಗುತ್ತಿದ್ದು, ಕೂಡಲೇ ಸರಕಾರ ವಕ್ಸ್ ಬೋರ್ಡ್ ರದ್ದುಗೊಳಿಸಿ ಆಸ್ತಿಯನ್ನು ಸರಕಾರ ವಶ ಪಡಿಸಬೇಕು ಎಂದು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಯಶ್‌ಪಾಲ್ ಸುವರ್ಣ ಒತ್ತಾಯಿಸಿದ್ದಾರೆ.
Kshetra Samachara
28/09/2022 06:07 pm