ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಮೃತ್ಯುಗುಂಡಿಗಳಿಗೆ ನಗರಸಭೆ ಮುಕ್ತಿ; ಶ್ಲಾಘನೆ ವ್ಯಕ್ತ

ಪಬ್ಲಿಕ್ ನೆಕ್ಸ್ಟ್ ಇಂಪ್ಯಾಕ್ಟ್

ಉಡುಪಿ: ಶ್ರೀಕೃಷ್ಣಮಠಕ್ಕೆ ಸಂಪರ್ಕಿಸುವ ಕನಕದಾಸ ರಸ್ತೆಯ ಪಾದಚಾರಿ ರಸ್ತೆಯಲ್ಲಿ ಮೃತ್ಯುಗುಂಡಿಗಳು ನಿರ್ಮಾಣವಾಗಿದ್ದವು. ಹಲವಾರು ಯಾತ್ರಿಕರು ಗುಂಡಿಯಲ್ಲಿ ಬಿದ್ದು ಗಾಯಾಳುಗಳಾದ ಘಟನೆಗಳೂ ನಡೆದಿದ್ದವು.

ಈ ರಸ್ತೆ ಮಾತ್ರವಲ್ಲದೆ, ನಗರದ ಹಲವು ಭಾಗಗಳಲ್ಲಿ ಇದೇ ರೀತಿಯ ಸಮಸ್ಯೆಗಳು ಕಂಡು ಬಂದಿದ್ದವು. ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು. ಇಲ್ಲದಿದ್ದರೆ, ಅಪಾಯ ಕಟ್ಟಿಟ್ಟ ಬುತ್ತಿ ಎಂದು ಪಬ್ಲಿಕ್ ನೆಕ್ಸ್ಟ್ ತನ್ನ ವರದಿ ಮೂಲಕ ಎಚ್ಚರಿಸಿತ್ತು.

ಸಾಮಾಜಿಕ ಕಾರ್ಯಕರ್ತ ನಿತ್ಯಾನಂದ ಒಳಕಾಡು ಕೂಡ ಪಬ್ಲಿಕ್ ನೆಕ್ಸ್ಟ್ ಅಭಿಯಾನಕ್ಕೆ ಬೆಂಬಲ ಸೂಚಿಸಿದ್ದರು. ಇದೀಗ ನಗರಸಭೆ ವರದಿಗೆ ಸ್ಪಂದಿಸಿ ಮರಣಗುಂಡಿಗಳನ್ನು ಮುಚ್ಚುವ ಮೂಲಕ ಸಮಸ್ಯೆ ಬಗೆಹರಿಸಿದೆ. ಪಬ್ಲಿಕ್ ನೆಕ್ಸ್ಟ್ ತನ್ನ ಸಾಮಾಜಿಕ ಜವಾಬ್ದಾರಿಯನ್ನು ಇದೇ ರೀತಿ ಮುಂದುವರೆಸಲಿದೆ.

Edited By : Nagesh Gaonkar
Kshetra Samachara

Kshetra Samachara

09/09/2022 07:17 pm

Cinque Terre

15.32 K

Cinque Terre

1

ಸಂಬಂಧಿತ ಸುದ್ದಿ